Home » ಗೆದ್ದಿದ್ದ ವಾಯುನೆಲೆಗೆ ಮೋದಿ, ಸೋತ ನೆಲೆಗೆ ಪಾಕ್ ಪ್ರಧಾನಿ
 

ಗೆದ್ದಿದ್ದ ವಾಯುನೆಲೆಗೆ ಮೋದಿ, ಸೋತ ನೆಲೆಗೆ ಪಾಕ್ ಪ್ರಧಾನಿ

by Kundapur Xpress
Spread the love

ಸಿಯಾಲ್‌ಕೋಟ್ : ಪಾಕಿಸ್ತಾನದ ಮೇಲಿನ ದಾಳಿ ವೇಳೆ ಅದ್ಭುತ ಪರಾಕ್ರಮ ತೋರಿದ್ದ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿ ಯೋಧರ ಜೊತೆ ಸಂವಾದ ನಡೆಸಿದ್ದರು. ಜೊತೆಗೆ ವಾಯುನೆಲೆ ಧ್ವಂಸ ಮಾಡಿದ್ದೇವೆ ಎಂಬ ಪಾಕ್ ಆರೋಪವನ್ನು ಸಾಕ್ಷ್ಯ ಸಮೇತ ಸುಳ್ಳು ಮಾಡಿದ್ದಾರೆ.

ಇದೀಗ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮೋದಿ ಅವರ ಭೇಟಿಯನ್ನು ನಕಲು ಮಾಡಿದ್ದಾರೆ. ಭಾರತದ ದಾಳಿಯಲ್ಲಿ ಭಾರೀ ಪೆಟ್ಟು ತಿಂದಿದ್ದ ಸಿಯಾಲ್‌ಕೋಟ್ ಮತ್ತು ಪಸ್ತೂರ್ ವಾಯುನೆಲೆಗೆ ಪ್ರಧಾನಿ ಶೆಹಬಾಜ್ ಬುಧವಾರ ಭೇಟಿ ಮಾಡಿದ್ದಾರೆ. ಆದರೆ ಮೋದಿ ರೀತಿ ಫೋಟೋ ಬಿಡುಗಡೆ ಧೈರ್ಯವನ್ನು ಅವರು ತೋರಿಸಿಲ್ಲ.

 

Related Articles

error: Content is protected !!