Home » ಭಯೋತ್ಪಾದನೆ, ನಕ್ಸಲಿಸಂ ಬಗ್ಗೆ ಶೂನ್ಯ ಸಹಿಷ್ಣುತೆ : ಮೋದಿ
 

ಭಯೋತ್ಪಾದನೆ, ನಕ್ಸಲಿಸಂ ಬಗ್ಗೆ ಶೂನ್ಯ ಸಹಿಷ್ಣುತೆ : ಮೋದಿ

by Kundapur Xpress
Spread the love

ಹೊಸದಿಲ್ಲಿ : ಭಯೋತ್ಪಾದನೆ ಮತ್ತು ನಕ್ಸಲ್ ವಾದದ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಗೆ ತಮ್ಮ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ರೈಸಿಂಗ್ ನಾರ್ತ್ ಈಸ್ಟ್ ಇನ್ವೆಸ್ಟರ್ಸ್ ಸಮ್ಮಿಟ್ ಉದ್ಘಾಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಹಿಂಸಾಚಾರದಿಂದ ಬಳಲುತ್ತಿದ್ದ ಈ ಪ್ರದೇಶವು ಈಗ ಪರಿವರ್ತನೆ ಮತ್ತು ತ್ವರಿತ ಅಭಿವೃದ್ಧಿಯ ಹಾದಿಯಲ್ಲಿದೆ ಎಂದರು.

ಕಳೆದೊಂದು ದಶಕದಲ್ಲಿ ಶಾಂತಿ ಒಪ್ಪಂದಗಳಿಗಾಗಿ ನಡೆಸಿದ ‘ಸತತ ಪ್ರಯತ್ನಗಳ ಪರಿಣಾಮ ಇಂದು 10,000 ಯುವಕರು ಶಸ್ತ್ರಾಸ್ತ್ರಗಳ ತೊರೆದು ಶಾಂತಿ ಹಾದಿ ತುಳಿದಿದ್ದಾರೆ. ಇದು ಬದಲಾವಣೆ ಮತ್ತು ಸ್ಥಿರತೆಯ ಪ್ರಬಲ ಸಂಕೇತವಾಗಿದೆ ಎಂದು ಶ್ಲಾಘಿಸಿದರು. ಈ ಪರಿವರ್ತನೆಯು ವಲಯದಲ್ಲಿ ಹೊಸ ಉದ್ಯೋಗಾವಕಾಶಗಳು ಮತ್ತು ಉದ್ಯಮಶೀಲತೆ ಅವಕಾಶಗಳ ತೆರೆಯಲು ಪೂರಕವಾಯಿತು ಎಂದು ಮೋದಿ ವಿವರಿಸಿದರು.

 

Related Articles

error: Content is protected !!