Home » ಕೇಂದ್ರ – ರಾಜ್ಯ ಟೀಂ ಇಂಡಿಯಾ ರೀತಿ ಒಗ್ಗೂಡಲು ಮೋದಿ ಕರೆ
 

ಕೇಂದ್ರ – ರಾಜ್ಯ ಟೀಂ ಇಂಡಿಯಾ ರೀತಿ ಒಗ್ಗೂಡಲು ಮೋದಿ ಕರೆ

by Kundapur Xpress
Spread the love

 ನವದೆಹಲಿ : ‘ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಟೀಂ ಇಂಡಿಯಾ ರೀತಿ ಒಂದಾಗಿ ಕೆಲಸೆ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟಕರವಲ್ಲ. ರಾಜ್ಯಗಳು 1 ರಾಜ್ಯ, 1 ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ ಪರಿಕಲ್ಪನೆಯ ಅಡಿ ತಮ್ಮ ರಾಜ್ಯ ದ ಕನಿಷ್ಠಒಂದು ಪ್ರವಾಸಿಸ್ಥಳವನ್ನಾದರೂ ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ರಾಜ್ಯಗಳು ವಿಕಸಿತವಾದಾಗ ದೇಶ ವಿಕಸಿತವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆ ಯಲ್ಲಿ ಶನಿವಾರ ಮಾತನಾಡಿದರು.

2024ರ ವಿಕಸಿತ ಭಾರತಕ್ಕೆ ವಿಕಸಿತ ರಾಜ್ಯ ಈ ಬಾರಿಯ ಆಯೋಗದ ಸಭೆಯ ಮುಖ್ಯ ವಿಷಯವಾಗಿತ್ತು.ರಾಜ್ಯಗಳು ವಿಕಸಿತವಾಗಲಿ: ಅಭಿವೃದ್ಧಿಗೆ ವೇಗ ನೀಡುವ ಅಗತ್ಯವಿದ್ದು, ದೇಶದಲ್ಲಿ ಈಗಾಗಲೇ ನಾವು ಅದರ ವೇಗ ಹೆಚ್ಚಿಸಿದ್ದೇವೆ. ವಿಕಸಿತ ಭಾರತ ಎಲ್ಲಾ ಭಾರತೀಯರ ಗುರಿ. ಪ್ರತಿ ರಾಜ್ಯವೂ ವಿಕಸಿತವಾದಾಗ ಭಾರತದ ವಿಕಾಸ ಸಾಧ್ಯವಾಗುತ್ತದೆ. ವಿಕಸಿತ ಭಾರತವು 140 ಕೋಟಿ ಭಾರತೀಯರ ಆಕಾಂಕ್ಷೆ ಎಂದರು. ನಾವು ಪ್ರತಿ ರಾಜ್ಯಗಳು, ಪ್ರತಿ ನಗರಗಳು, ಪ್ರತಿ ಪಾಲಿಕೆಗಳು ಮತ್ತು ಪ್ರತಿ ಗ್ರಾಮ ಗಳು ವಿಕಸಿತ ಆಗಬೇಕೆಂಬ ಗುರಿ ಇಟ್ಟುಕೊಳ್ಳಬೇಕು. ಈ ಏಕಗುರಿಯೊಂದಿಗೆ ಕೆಲಸ ಮಾಡಿದಾಗ ವಿಕಸಿತ ಭಾರತಕ್ಕಾಗಿ 2047ರ ವರೆಗೆ ಕಾಯಬೇಕಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

 

Related Articles

error: Content is protected !!