Home » ಟ್ರಂಪ್‌ ಹೇಳಿಕೆ ತಳ್ಳಿ ಹಾಕಿದ ಮೋದಿ
 

ಟ್ರಂಪ್‌ ಹೇಳಿಕೆ ತಳ್ಳಿ ಹಾಕಿದ ಮೋದಿ

ಯುದ್ದ ನಿಲ್ಲಿಸಿದ್ದು ಅಮೇರಿಕ ಅಲ್ಲ : ಮೋದಿ ಸ್ಪಷ್ಟನೆ

by Kundapur Xpress
Spread the love

ಕೆನಡಾ : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ದಿಗ್ಧತೆಯನ್ನು ಕಡಿಮೆ ಮಾಡಲು ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಉಭಯ ನಾಯಕರ ನಡುವೆ ನಡೆದ 35 ನಿಮಿಷಗಳ ದೂರವಾಣಿ ಸಂಭಾಷಣೆಯಲ್ಲಿ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಪ್ರಾರಂಭಿಸಲಾದ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳ ನಡುವಿನ ನೇರ ಚರ್ಚೆಗಳ ಮೂಲಕ ಮಾತ್ರ ಮೇ ತಿಂಗಳಲ್ಲಿ ಮಿಲಿಟರಿ ಕಾರ್ಯಾಚರಣೆ ಯನ್ನು ನಿಲ್ಲಿಸಲಾಗಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ತಿಳಿಸಿದ್ದಾರೆ.

ಭಾರತದ ದೃಢ ನಿಲುವು :

ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬಾಹ್ಯ ಮಧ್ಯಸ್ಥಿಕೆಯನ್ನು ಭಾರತ ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಮೋದಿ ಸ್ಪಷ್ಟವಾಗಿ ಹೇಳಿದ್ದು, ಭಾರತದೊಳಗಿನ ಈ ನೀತಿಯ ಬಗ್ಗೆ ಬಲವಾದ ರಾಜಕೀಯ ಒಮ್ಮತವಿದೆ ಎಂದಿದ್ದಾರೆ.

ಭಾರತವು ಭಯೋತ್ಪಾದನೆಯನ್ನು ಪರೋಕ್ಷ ಯುದ್ಧವೆಂದಲ್ಲ ಬದಲಾಗಿ ಸಂಪೂರ್ಣ ಯುದ್ದವೆಂದು ಪರಿಗಣಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ವಿರುದ್ಧ ಆಪರೇಷನ್ ಸಿಂದೂರ್ ಮುಂದುವರಿದಿದೆ ಎಂದು ದೃಢ ಪಡಿಸಿದ್ದಾರೆ. ಭಾರತ ಸೀಮಿತ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದೆ. ಭಯೋತ್ಪಾದಕರ ಅಡಗು ತಾಣಗಳನ್ನು ಮಾತ್ರ ಗುರಿಯಾಗಿರಿಸಿ ಕೊಂಡಿದೆ ಎಂದು ಅವರು ಒತ್ತಿ ಹೇಳಿದರು.

 

Related Articles

error: Content is protected !!