ಮುಜಾಫರ್ಪುರ : ಪ್ರತಿಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯಾ’ ಎಂಬುದು ಹೇಡಿಗಳ ಕೂಟ. ಪಾಕಿಸ್ತಾನದ ಅಣ್ವಸ್ತ್ರಕ್ಕೆ ಹೆದರುವ ಹೇಡಿಗಳು ಆ ಕೂಟದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಪಾಕಿಸ್ತಾನಕ್ಕೆ ಬಳೆ ತೊಡಿಸಲೂ ಸಿದ್ಧ ಎಂದು ನ್ಯಾಷನಲ್ ಕಾನ್ಸರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹೆಸರು ಹೇಳದೆಯೇ ಟಾಂಗ್ ನೀಡಿದ್ದಾರೆ. ಬಿಹಾರದ ಹಾಜಿಪುರ, ಮುಜಾಪ್ಟರ್ಪುರ ಹಾಗೂ ಸರನ್ ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಸರಣಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾ ನದ ಅಣ್ವಸ್ತ್ರಗಳು ಇಂಡಿಯಾ ಕೂಟದ ನಾಯಕರಿಗೆ ದುಸ್ವಪ್ನ ವಾಗಿ ಕಾಡುತ್ತಿವೆ. ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುವ ಆ ಪಕ್ಷಗಳು, ಸರ್ಜಿ ಕಲ್ ದಾಳಿ ಬಗ್ಗೆ ಶಂಕೆ ವ್ಯಕ್ತಪಡಿಸುತಿವೆ. ಆ ಕೂಟದ ಎಡರಂಗದ ನಾಯಕರು ನಮ್ಮ ಅಣ್ವಸ್ತ್ರಗಳನ್ನು ನಾಶಗೊಳಿಸಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತಾರೆ ಎಂದರು.