114
ನವದೆಹಲಿ : ಪಹಲ್ಕಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನೆ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ. ಜೊತೆಗೆ ಗಡಿ ಪೋಸ್ಟ್‌ಗಳ ಬಳಿ ಹಾಕಿದ್ದ ತನ್ನ ದೇಶದ ಧ್ವಜಗಳನ್ನು ತೆರವುಗೊಳಿಸಿದೆ ಎಂದು ವರದಿಗಳು ತಿಳಿಸಿದೆ
ಕಳೆದ 6 ದಿನಗಳಿಂದ ಪಾಕಿಸ್ತಾನ ಗಡಿಯಲ್ಲಿ ಕದನ ಉಲ್ಲಂಘನೆ ವಿರಾಮ ಮಾಡಿ ಭಾರತದ ಕಡೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಸೂಕ್ತ ತಿರುಗೇಟು ನೀಡಿದೆ. ಅದರ ಬೆನ್ನಲ್ಲೇ ಪಾಕ್ ಸರ್ಕಾರದ ಹಲವು ಸಚಿವರೇ ಭಾರತದ ದಾಳಿ ಖಚಿತ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ದಾಳಿಯ ಭೀತಿಗೆ ಒಳಗಾಗಿರುವ ಪಾಕ್ ಸೇನೆ ಮುಂಜಾಗ್ರತಾ ಕ್ರಮವಾಗಿ ತನ್ನ ಮುಂಚೂಣಿ ಪಡೆಗಳನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ. ಇದು ಸಂಭವನೀಯ ಯುದ್ಧಕ್ಕಿಂತ ಮೊದಲೇ ಪಾಕಿಸ್ತಾನ ಸೇನೆಯ ನೈತಿಕ ಸ್ಥೆರ್ಯ ಕುಸಿದಿರುವ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

