Home » ಕಾಂಗ್ರೇಸ್‌ ವಿರುದ್ಧ ಮೋದಿ ತೀವ್ರ ವಾಗ್ದಾಳಿ
 

ಕಾಂಗ್ರೇಸ್‌ ವಿರುದ್ಧ ಮೋದಿ ತೀವ್ರ ವಾಗ್ದಾಳಿ

by Kundapur Xpress
Spread the love

ಹೊಸದಿಲ್ಲಿ: 18ನೇ ಲೋಕಸಭೆಯ ಮೊದಲ ಅಧಿವೇಶನವೇ ಭಾರಿ ವಾಕ್ಸಮರಕ್ಕೆ ಕಾರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್, ವಿಪಕ್ಷನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಚಿತ್ರವೆಂದರೆ ಪ್ರತಿಪಕ್ಷನಾಯಕ ರಾಹುಲ್ ಗಾಂಧಿ ಸೇರಿದಂತೆ 50ಕ್ಕೂ ಹೆಚ್ಚು ಸದಸ್ಯರ ಭಾಷಣ ಸದ್ದಿಲ್ಲದೆ ನಡೆದಿದ್ದು, ಪ್ರಧಾನಿ ಭಾಷಣಕ್ಕೆ ಮಾತ್ರ ಪ್ರತಿಪಕ್ಷಸದಸ್ಯರು ಅಡ್ಡಿಪಡಿಸಿದ್ದು ಸ್ಪೀಕರ್ ಆಕ್ರೋಶಕ್ಕೂ ಕಾರಣವಾಯಿತು. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಸಂಬಂಧ ಉತ್ತರ ನೀಡಿದ ಮೋಡಿ ಅವರು, ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಆರೋಪಗಳಿಗೆ ಸೂಕ್ತ ಉತ್ತರವಿತ್ತರು. ರಾಹುಲ್ ಹೆಸರೆತ್ತದೇ ಅವರದಿನ್ನು ಹುಡುಗು ಬುದ್ದಿ ಎಂದ ಅವರು, ಕಾಂಗ್ರೆಸ್ ಈಗಲೂ ಪರಾವಲಂಬಿಯಾಗಿ ಬದುಕುತ್ತಿದೆ ಎಂದರು.

   

Related Articles

error: Content is protected !!