ಶ್ರೀನಗರ : ಜಮ್ಮು ಜಿಲ್ಲೆಯ ಆರ್‌ಎಸ್ ಪುರಾದ ಗಡಿ ಪ್ರದೇಶದಿಂದ ಭದ್ರತಾ ಪಡೆಗಳು ಪಾರಿವಾಳವೊಂದನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ ಜಮ್ಮು ರೈಲ್ವೆ ನಿಲ್ದಾಣ ಸ್ಫೋಟಿಸುವ ಬೆದರಿಕೆ ಪತ್ರ ಹೊಂದಿದ್ದವು. ಈ ಹಿನ್ನಲೆ ಪ್ರದೇಶದಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಪಾಕಿಸ್ತಾನ ವಿವಿಧ ಸಂದೇಶಗಳನ್ನು ಹೊತ್ತ ಬಲೂನುಗಳು, ಧ್ವಜಗಳು ಮತ್ತು ಪಾರಿವಾಳವನ್ನು ಅಂತಾರಾಷ್ಟ್ರೀಯ ಗಡಿಯ (ಐಬಿ) ಭಾರತದ ಭಾಗಕ್ಕೆ ಕಳುಹಿಸಿದೆ. ದೇಶದಲ್ಲಿ ಬೆದರಿಕೆ ಪತ್ರ ಹೊತ್ತ ಪಾರಿವಾಳವನ್ನು ಸೆರೆಹಿಡಿಯುತ್ತಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.
ಈ ಪಾರಿವಾಳವು ಅಂತಾ ರಾಷ್ಟ್ರೀಯ ಗಡಿ ಕಾಟ್ಟಾರಿಯಾದಲ್ಲಿ ಪತ್ತೆಯಾ ಗಿದೆ. ಜಮ್ಮು ರೈಲ್ವೆ ನಿಲ್ದಾಣವನ್ನು ಸ್ಫೋಟಿಸುವ ಸಂದೇಶವನ್ನು ಹೊಂದಿದ್ದ ಚೀಟಿಯನ್ನು ಅದರ ಉಗುರುಗಳಿಗೆ ಕಟ್ಟಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಚೀಟಿಯಲ್ಲಿ ಸಂದೇಶ ವು ಉರ್ದು ಮತ್ತು ಇಂಗ್ಲಿಷ್ ಲ್ಲಿದ್ದು, ಕಾಶ್ಮೀರ ಸ್ವಾತಂತ್ರ್ಯ, ಸಮಯ ಬಂದಿದೆ ಮುಂತಾದ ಸಾಲುಗಳುಗಳಿತ್ತು. ಅದೇ ರೀತಿ ಐಇಡಿಯೊಂದಿಗೆ ಜಮ್ಮು ರೈಲ್ವೆ ನಿಲ್ದಾಣವನ್ನು ಸ್ಫೋಟಿಸುವ ಬೆದರಿಕೆ ಸಂದೇಶವನ್ನು ಹೊಂದಿತ್ತು.

