Home » ವಿಮಾನ ಉಲ್ಟಾ ಪಲ್ಟಾ : 80 ಜನ ಬಚಾವ್
 

ವಿಮಾನ ಉಲ್ಟಾ ಪಲ್ಟಾ : 80 ಜನ ಬಚಾವ್

by Kundapur Xpress
Spread the love

ಟೊರಾಂಟೋ : 76 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳಿದ್ದ ವಿಮಾನವೊಂದು ಕೆನಡಾದ ಟೊರಾಂಟೋ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದೆ. ಅಪಘಾತದ ತೀವ್ರತೆಗೆ ಬೆಂಕಿ ಹೊತ್ತಿಕೊಂಡು ವಿಮಾನ ಪೂರ್ಣ ಉಲ್ಟಾಪಲ್ಟಾ ಆದರೂ ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲರೂ ಬಚಾವ್ ಆಗಿದ್ದಾರೆ. ಅಪಘಾತದ ವೇಳೆ ವಿಮಾನದ ಇಂಧನ ಟ್ಯಾಂಕ್ ಗೆ ಯಾವುದೇ ಹಾನಿಯಾಗದ ಕಾರಣ ದೊಡ್ಡಮಟ್ಟದ ಬೆಂಕಿ ಕಾಣಿಸಿಕೊಳ್ಳಲಿಲ್ಲ ಮತ್ತು ವಿಮಾನಕ್ಕೆ ಭಾರೀ ಹಾನಿಯಾಗದೇ ಇದ್ದದ್ದು ಜನರು ಪ್ರಾಣ ಉಳಿಸಿಕೊಳ್ಳಲು ಕಾರಣವಾಗಿದೆ

ಏನಾಯ್ತು?

ಡೆಲ್ಟಾ ಏರ್‌ಲೈನ್ಸ್‌ ಗೆ ಸೇರಿದ ಬೊಂಬಾರ್ಡಿಯರ್ ವಿಮಾನ ಸೋಮವಾರ ಮಧ್ಯಾಹ್ನ 2.15ರ ವೇಳೆಗೆ ಟೊರಾಂಟೋದ ಪಿಯರ್ಸನ್ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ಲ್ಯಾಂಡಿಂಗ್‌ಗೂ ಕೆಲ ಕ್ಷಣಗಳ ಮೊದಲು ಎಟಿಸಿ ಮತ್ತು ವಿಮಾನದ ಪೈಲಟ್ ನಡುವೆ ಸಂವಾದ ನಡೆದಾಗ ಎಲ್ಲವೂ ಸರಿಯಾಗಿತ್ತು.

ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಭಾರೀ ಸದ್ದಿನೊಂದಿಗೆ ರನ್ ವೇಗೆ ಅಪ್ಪಳಿಸಿ ಲ್ಯಾಂಡಿಂಗ್ ಆಗಿದೆ. ಈ ತೀವ್ರತೆಗೆ ಘಟನಾ ಸ್ಥಳದಲ್ಲಿ ಬೆಂಕಿ · ಕಾಣಿಸಿಕೊಂಡಿದ್ದೂ ಅಲ್ಲದೆ ವಿಮಾನ ಪೂರ್ಣ ಉಲ್ಟಾ ಆಗಿ ಬಿದ್ದಿದೆ. ಅದೃಷ್ಟವಶಾತ್ ಸಾವಿರಾರು ಲೀಟರ್ ಇದ್ದ ವಿಮಾನದ ಇಂಧನ ಟ್ಯಾಂಕ್‌ಗೆ ಹಾನಿಯಾಗದ ಕಾರಣ, ಅಪಘಾತದ ವೇಳೆ ಕಾಣಿಸಿಕೊಂಡ ಬೆಂಕಿ ವ್ಯಾಪಿಸಿಲ್ಲ. ಜೊತೆಗೆ ಕಾಣಿಸಿಕೊಂಡ ಬೆಂಕಿ ಕೂಡಾ ಸ್ಥಳದಲ್ಲಿನ ಭಾರೀ ಹಿಮಪಾತದ ತೀವ್ರತೆಗೆ ಆರಿ ಹೋಗಿದೆ. ಜೊತೆಗೆ ವಿಮಾನಕ್ಕೂ ಹೆಚ್ಚಿನ ಹಾನಿಯಾಗದ ಕಾರಣ ವಿಮಾನದೊಳಗಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಪೈಕಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ

 

Related Articles

error: Content is protected !!