117
ಭಾಗಲ್ಪುರ (ಬಿಹಾರ ): ಪಿಎಂ ಕಿಸಾನ್ ಸಮ್ಹಾನ್ ನಿಧಿಯ 19ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು. ಇದರಿಂದ ದೇಶಾದ್ಯಂತ 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 22,000 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತ ಜಮೆಯಾಗಲಿದೆ.
ಭಾರತದ ಅನ್ನದಾತರ ಬಗ್ಗೆ ಸರ್ಕಾರ ಹೆಮ್ಮೆ ಪಡುತ್ತದೆ ಮತ್ತು ಅವರ ಜೀವನವನ್ನು ಸುಧಾರಿಸಲು ಬದ್ಧವಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ವಾರ್ಷಿಕವಾಗಿ 6,000 ರೂ. ನೀಡಲಾಗುತ್ತದೆ. ಈ ಮೊತ್ತವನ್ನು ರೈತರ ಖಾತೆಗೆ 3 ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ವರೆಗೆ ಈ ರೀತಿ ಮೋದಿ ಸರಕಾರ ರೈತರ ಖಾತೆಗೆ 3.68. ಲಕ್ಷ ಕೋ. ರೂ.ಗಳಿಗೂ ಅಧಿಕ ಮೊತ್ತವನ್ನು ವರ್ಗಾಯಿಸಿದೆ.

