ಹೊಸದಿಲ್ಲಿ : ಮಹಾಕುಂಭವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿದೆ ಮತ್ತು ಅಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕೆ ಇದೆಯೇ ಎಂದು ಪ್ರಶ್ನಿಸುತ್ತಿದ್ದವರಿಗೆ ಸೂಕ್ತ ಉತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಮೋದಿ, ಭಾರತದಲ್ಲಿ ಸುಮಾರು ಒಂದೂವರೆ ತಿಂಗಳು ಮಹಾಕುಂಭ ಮೇಳದ ‘ಉತ್ಸಾಹವನ್ನು ನಾವು ಕಂಡಿದ್ದೇವೆ.
ಅನುಕೂಲ ಮತ್ತು ಅನಾನುಕೂಲತೆಯನ್ನು మిరి ಲಕ್ಷಾಂತರ ಭಕ್ತರು ಭಕ್ತಿಯಿಂದ ಒಟ್ಟುಗೂಡಿದ ರೀತಿ ನಮ್ಮ ದೊಡ್ಡ ಶಕ್ತಿಯಾಗಿದೆ. ಮಹಾಕುಂಭದ ಅತ್ಯಂತ ಪವಿತ್ರ ಕೊಡುಗೆ ಏಕತೆಯಾಗಿದೆ ಎಂದರು.
ಮಹಾಕುಂಭವು ದೇಶದ ಪ್ರತಿಯೊಂದು ಪ್ರದೇಶ ಮತ್ತು ಮೂಲೆ ಮೂಲೆಯಿಂದ ಜನರು ಒಟ್ಟುಗೂಡಿದೆ ಒಂದು ಬೃಹತ್ ಕಾರ್ಯಕ್ರಮವಾಗಿತ್ತು. ಜನರು ತಮ್ಮ ಅಹಂಕಾರವನ್ನು ಬದಿಗಿಟ್ಟು ನಾನು ಅಲ್ಲ, ನಾವು ಎಂಬ ಭಾವನೆಯೊಂದಿಗೆ ಪ್ರಯಾಗರಾಜ್‌ನಲ್ಲಿ ಒಟ್ಟುಗೂಡಿದರು. ವಿಶೇಷವಾಗಿ ಜಗತ್ತು ಅಸ್ತವ್ಯಸ್ತವಾಗಿದ್ದ ಸಮಯದಲ್ಲಿ ಮಹಾಕುಂಭದಲ್ಲಿ ನಡೆದ ಬೃಹತ್ ಏಕತೆಯ ಪ್ರದರ್ಶನವು ಭಾರತದ ಶಕ್ತಿಯಾಗಿದೆ ಎಂದರು.

