60
ಹೊಸದಿಲ್ಲಿ: ವಿಶಾಖಪಟ್ಟಣಂನಲ್ಲಿ ವಿಶ್ವದ ಅತಿದೊಡ್ಡ ಯೋಗ ದಿನದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಿದ ಬೆನ್ನಲ್ಲೇ, ಯೋಗವನ್ನು ಜೀವನದ ಭಾಗವನ್ನಾಗಿ ಮಾಡುವ ಆಂದೋಲನ ಬಲಪಡಿಸಿದ ಆಂಧ್ರಪ್ರದೇಶದ ಜನರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ.
ಜೂನ್ 21ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ವೈಝಾಗ್‌ನ ಆರ್ ಕೆ ಬೀಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯುದ್ಧ ನೌಕೆಗಳಲ್ಲಿ ನೌಕಾಪಡೆಯ ಸಿಬ್ಬಂದಿ ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಿದ್ದರು. ಅವರನ್ನು ಅಭಿನಂದಿಸುತ್ತಾ, ಯೋಗವು ಮತ್ತೊಮ್ಮೆ ಜನರನ್ನು ಒಟ್ಟುಗೂಡಿ ಸುತ್ತದೆ. ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡುವ ಆಂದೋಲನವನ್ನು ಬಲಪಡಿಸಿದ ರೀತಿಗೆ ಆಂಧ್ರ ಪ್ರದೇಶದ ಜನರಿಗೆ ಅಭಿನಂದನೆಗಳು ಎಂದು ಹೇಳಿದರು

