Home » ಕೆರೆಬಿಯನ್‌ ಜೊತೆ ಸಹಕಾರ ವೃದ್ದಿಗೆ ಭಾರತ ಉತ್ಸುಕ
 

ಕೆರೆಬಿಯನ್‌ ಜೊತೆ ಸಹಕಾರ ವೃದ್ದಿಗೆ ಭಾರತ ಉತ್ಸುಕ

ಪ್ರಧಾನಿ ನರೇಂದ್ರ ಮೋದಿ

by Kundapur Xpress
Spread the love

ಜಾರ್ಜ್‌ ಟೌನ್ (ಗಯಾನಾ):  ವಿವಿಧ ಕ್ಷೇತ್ರಗಳಲ್ಲಿ ಕೆರಿಬಿಯನ್  ದೇಶಗಳೊಂದಿಗಿನ ಸಹಕಾರವನ್ನು ಇನ್ನಷ್ಟು ವೃದ್ಧಿಸಲು ಭಾರತ ಉತ್ಸುಕವಾಗಿದೆ ಎಂದು ವೆಸ್ಟ್ ಇಂಡೀಸ್ ದ್ವೀಪ ಸಮೂಹದ ಗಯಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಯಾನಾಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಇರ್ಫಾನ್ ಅಲಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ, ಉಭಯ ದೇಶಗಳ ನಡುವೆ ಔಷಧ, ಇಂಧನ, ಡಿಜಿಟಲ್ ಪೇಮೆಂಟ್ ಸೇರಿದಂತೆ 10 ಒಪ್ಪಂದಕ್ಕೆ ಸಹಿ ಹಾಕಿದರು. ಅಲ್ಲದೆ, 2ನೇ ಭಾರತ- ಕ್ಯಾರಿಕೋಮ್ ಶೃಂಗಸಭೆಯಲ್ಲಿ ನಿಮಿತ್ತ ಮಾತನಾಡಿದರು.

ಗಯಾನಾಗೆ 56 ವರ್ಷ ನಂತರ ಭಾರತದ ಪ್ರಧಾನಿ ಭೇಟಿ ನೀಡುತ್ತಿದ್ದಾರೆ ಈ ವೇಳೆ ಏರ್ಪಟ್ಟ ಸಹಕಾರವು ಆರ್ಥಿಕ ಸಹಕಾರ, ಕೃಷಿ ಹಾಗೂ ಆಹಾರ ಭದ್ರತೆ, ಆರೋಗ್ಯ ಹಾಗೂ ಔಷಧ, ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಸಂಬಂಧ ಮತ್ತಷ್ಟು ಬಲಪಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿ 2019ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮಯದಲ್ಲಿ ಕ್ಯಾರಿಕೋಮ್ ದೇಶಗಳ ನಾಯಕರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು.

 

Related Articles

error: Content is protected !!