ದಾಹೋದ್ : ಭಾರತವನ್ನು ದ್ವೇಷಿಸುವುದು ಮತ್ತು ಅದಕ್ಕೆ ಹಾನಿಯುಂಟು ಮಾಡುವ ಬಗ್ಗೆ ಯೋಚಿಸುವುದು ಪಾಕಿನ ಪರಮ ಗುರಿಯಾದರೇ ಭಾರತ ಬಡತನವನ್ನು ತೊಡೆದು ಹಾಕಿ ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಗುಜರಾತ್‌ನ ದಾಹೋದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂದೂರ ಕೇವಲ ಸೇನಾ ಕಾರ್ಯಾಚರಣೆಯಲ್ಲ, ಅದು ಭಾರತದ ನೀತಿ ಮತ್ತು ಭಾವನೆಗಳ ಅಭಿವ್ಯಕ್ತಿ. 2014ರ ಮೇ 26ರಂದು ರಾಷ್ಟ್ರದ ನಾಗರಿಕರು ತಮ್ಮನ್ನು ಪ್ರಧಾನ ಸೇವಕನನ್ನಾಗಿ ಮಾಡಿದಾಗ ನೀಡಿದ ಜವಾಬ್ದಾರಿಯ ಭಾಗ ಎಂದರು.
ಭಯೋತ್ಪಾದಕರು ತಮ್ಮ ಕನಸಿನಲ್ಲಿಯೂ ನಮ್ಮ ವಿರುದ್ಧ ಹೋರಾಡುವುದು ಇಷ್ಟು ಕಷ್ಟ ಎಂದು ಊಹಿಸಿರಲಿಲ್ಲ ಎಂದು ಹೇಳಿದರು. ದೇಶದ 3 ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ನಮ್ಮ ಯೋಧರು ಕಳೆದ ಕೆಲವು ದಶಕಗಳಿಂದ ಜಗತ್ತು ಕಂಡಿರದಂತಹ. ಕಾರ್ಯವನ್ನು ನಿರ್ವಹಿಸಿದರು ಎಂದು ಅವರು ಸೇನೆಯನ್ನು ಶ್ಲಾಘಿಸಿದರು
ಇದೇ ವೇಳೆ ಅವರು, ಹೋಳಿ, ದೀಪಾವಳಿ ಮತ್ತು ಗಣೇಶ ಪೂಜೆಯಂತಹ ಹಬ್ಬಗಳ ಸಂದರ್ಭದಲ್ಲಿ ಭಾರತದಲ್ಲಿಯೇ ತಯಾ ರಾಗುವ ಉತ್ಪನ್ನಗಳನ್ನು ಖರೀದಿಸಿ ಬಳಸುವಂತೆ ಜನರನ್ನುಒತ್ತಾಯಿಸಿದರು

ವಿವಿಧ ಯೋಜನೆಗಳ ಉದ್ಘಾಟನೆ :
24,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಮೊದಲ 9,000 ಎಚ್ ಪಿಯ ಲೊಕೊಮೊಟಿವ್ ಎಂಜಿನ್ ಅನ್ನು ಅನಾವರಣಗೊಳಿಸಿದರು. ಜೊತೆಗೆ, 21,405 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೋಲಿಂಗ್ ಸ್ಟಾಕ್ ಕಾರ್ಯಾಗಾರವನ್ನು ಉದ್ಘಾಟಿಸಿದರು

