ರುದ್ರಪುರ : ದೇಶದಲ್ಲಿ ಲೋಕಸಭಾ ಚುನಾವಣೆ ಕಾವೇರಿರುವ ಹೊತ್ತಲ್ಲಿಯೇ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ರುದ್ರಪುರದಲ್ಲಿ ಚುನಾವಣಾ ಪ್ರಚಾರ ವೇಳೆ ಕೈ ನಾಯಕ ರಾಹುಲ್ ಗಾಂಧಿ ಬಿಸಿಲಿನ ಝಳ ತಡೆಯಲಾಗದೇ ತಲೆಯ ಮೇಲೆ ನೀರು ಸುರಿದುಕೊಂಡಿರುವ ಘಟನೆ ನಡೆದಿದೆ. ವೇದಿಕೆ ಮುಂಭಾಗದಲ್ಲಿ ನಿಂತು ಮಾತನಾಡುತ್ತಿದ್ದ ರಾಹುಲ್ ಬಾಟಲಿನಿಂದ ನೀರು ಕುಡಿದು, ನೀರನ್ನು ತಲೆ ಮೇಲೆ ಸುರಿದುಕೊಂಡಿದ್ದಾರೆ.