Home » ಗೆಳಯನಿಗೆ 500 ಕೋಟಿ ಆಸ್ತಿ ಬರೆದಿಟ್ಟ ಟಾಟಾ
 

ಗೆಳಯನಿಗೆ 500 ಕೋಟಿ ಆಸ್ತಿ ಬರೆದಿಟ್ಟ ಟಾಟಾ

by Kundapur Xpress
Spread the love

ಮುಂಬೈ : ಇತ್ತೀಚೆಗಷ್ಟೇ ನಿಧನರಾದ ದೇಶ ಕಂಡ ಅಪ್ರತಿಮ ಉದ್ಯಮಿ ರತನ್ ಟಾಟಾ ಅವರು ತಮ್ಮ ಆಸ್ತಿಯ ಮೂರನೇ ಒಂದು ಪಾಲು ಅಂದರೆ ಭರ್ಜರಿ 500 ಕೋಟಿ ರು. ಸಂಪತ್ತನ್ನು ದಶಕಗಳ ಹಿಂದಿನ ತಮ್ಮ ಹಾಸ್ಟೆಲ್ ರೂಂ ಮೇಟ್ ಹೆಸರಿಗೆ ಬರೆದಿಟ್ಟಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

 ರತನ್ ಟಾಟಾ ನಿಧನರಾದ 2 ವಾರಗಳ ಬಳಿಕ ಬಹಿರಂಗಪಡಿಸಲಾದ ಉಯಿಲಿನಲ್ಲಿ ಮೋಹಿನಿ ಮೋಹನ್ ದತ್ತಾ (74) ಅವರಿಗೆ ನೀಡಬೇಕಾದ ಪಾಲನ್ನು ಉಲ್ಲೇಖಿಸಲಾಗಿದೆ. ಅದು ಈಗ ಬೆಳಕಿಗೆ ಬಂದಿದೆ.

ದತ್ತಾರ ಬಗ್ಗೆ ಟಾಟಾ ಅವರ ಪರಿವಾರಕ್ಕೆ ಬಿಟ್ಟರೆ ಬೇರಾರಿಗೂ ಹೆಚ್ಚು ತಿಳಿದಿಲ್ಲ. ಹಾಗಾಗಿ ಅವರಿಗೆ ಮೀಸಲಿರುವ ಆಸ್ತಿಯ ಪಾಲನ್ನು ಪರಿಶೀಲಿಸಿ, ಹೈಕೋರ್ಟಿನಿಂದ ಪ್ರಮಾಣೀಕರಿಸಲ್ಪಟ್ಟ ಬಳಿಕವಷ್ಟೇ ನೀಡಲಾಗುವುದು. ಉಳಿದಂತೆ, ತಮ್ಮ ಸಹೋದರ, ಮಲ ಸಹೋದರಿ, ಮನೆ ಕೆಲಸದವರು, ಕಾರ್ಯ ನಿರ್ವಾಹಕ ಸಹಾಯಕ ಶಾಂತನು ನಾಯ್ಡು, ಸಾಕು ನಾಯಿ ಟೀಟೋಗೆ ಟಾಟಾ ತಮ್ಮ ಆಸ್ತಿಯನ್ನು ಹಂಚಿಕೆ ಮಾಡಿದ್ದಾರೆ.

 

Related Articles

error: Content is protected !!