Home » ದೇಶದ ರಕ್ಷಣೆ ಮತ್ತು ಸಾಮರ್ಥ್ಯದ ಶಕ್ತಿ ಪ್ರದರ್ಶನ
 

ದೇಶದ ರಕ್ಷಣೆ ಮತ್ತು ಸಾಮರ್ಥ್ಯದ ಶಕ್ತಿ ಪ್ರದರ್ಶನ

by Kundapur Xpress
Spread the love

ನವದೆಹಲಿ : ಭಾರತದ 76ನೇ ಗಣರಾಜ್ಯೋತ್ಸವದಂದು ದೇಶದ ಸೇನಾ ಶಕ್ತಿಯನ್ನು ವಿಜೃಂಬಣೆಯಿಂದ ಅನಾವರಣಗೊಳಿಸಲಾಯಿತು. ‘ಸಶಕ್ತ ಮತ್ತು ಸುರಕ್ಷಿತ ಭಾರತ ಥೀಂನ ಅಡಿಯಲ್ಲಿ ಭೂಸೇನೆ, ವಾಯು ಹಾಗೂ ನೌಕಾಪಡೆಗಳ ಜಂಟಿ ಸ್ತಬ್ದಚಿತ್ರಗಳು ಕರ್ತವ್ಯಪಥದಲ್ಲಿ ಸಾಗಿದವು. ಇದು ಅರ್ಜುನ್ ಯುದ್ಧ ಟ್ಯಾಂಕರ್, ತೇಜಸ್ ಯುದ್ಧವಿಮಾನ ಹಾಗೂ ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿತ್ತು.

ಈ ವೇಳೆ, ಮೊದಲ ಬಾರಿಗೆ ಸ್ವದೇಶಿ ನಿರ್ಮಿತ, ಕಡಿಮೆ ದೂರ ಕ್ರಮಿಸಬಲ್ಲ ‘ಪ್ರಳಯ್’ ಕ್ಷಿಪಣಿ ವ್ಯವಸ್ಥೆಯನ್ನು ಜಗತ್ತಿನೆದುರು ತೆರೆದಿಡಲಾಯಿತು. ಇದು 500 ರಿಂದ 1 ಸಾವಿರ ಕೆ.ಜಿ. ಸಾಮರ್ಥದ ಪೇಲೋಡ್ ಹೊಂದಿದ್ದು, 150 ರಿಂದ 500 ಕಿ.ಮೀ. ವರೆಗೆ ನಿಖರವಾಗಿ ನುಗ್ಗಿ ದಾಳಿ ಮಾಡಬಲ್ಲದು. ಮೊತ್ತ ಮೊದಲು ಲೆ. ಅಹಾನ್ ಕುಮಾರ್‌ ನೇತೃತ್ವದಲ್ಲಿ ವಿಶ್ವದ ಏಕೈಕ ಸಕ್ರಿಯ ಅಶ್ವದಳವಾದ 61 ಅಶ್ವಸೈನ್ಯವು ಪಥ ಸಂಚಲನವನ್ನು ಮುನ್ನಡೆಸಿತು. 

 

Related Articles

error: Content is protected !!