Home » ರಾಮಮಂದಿರಕ್ಕೆ ಖಲಿಸ್ಥಾನಿ ಬೆದರಿಕೆ
 

ರಾಮಮಂದಿರಕ್ಕೆ ಖಲಿಸ್ಥಾನಿ ಬೆದರಿಕೆ

by Kundapur Xpress
Spread the love

ಒಟ್ಟಾವಾ : ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರ ಗುರು ಪತ್ವಂತ್ ಸಿಂಗ್‌ ಪನ್ನುಅಯೋಧ್ಯೆಯ  ರಾಮಮಂದಿರ ಸೇರಿದಂತೆ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದ್ದಾನೆ.

ನಿಷೇಧಿತ ಸಿಖ್ ಫಾರ್ ಜಸ್ಟೀಸ್(ಎಸ್ ಎಫ್‌ಜೆ) ಸಂಘಟನೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪನ್ನು ನ.16 ಮತ್ತು 17ರಂದು ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾನೆ. ಕೆನಡಾದ ಈ ವಿಡಿಯೋ ಹಿಂದೂ ಪೂಜಾ ಸ್ಥಳಗಳ ವಿರುದ್ದ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಅಡಿಪಾಯವನ್ನು ನಾವು ಅಲುಗಾಡಿಸುತ್ತೇವೆ ಎಂದು ಪನ್ನು ಹೇಳಿಕೆಯಲ್ಲಿ ತಿಳಿಸಿದ್ದಾನೆ. ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರಕ್ಕೆ ಪನ್ನು ಕರೆ ನೀಡಿದ್ದಾನೆ 

   

Related Articles

error: Content is protected !!