156
ಹೊಸದಿಲ್ಲಿ : 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಡಾ.ಮೋಹನ್ ಭಾಗ್ವತ್ ಮತ್ತಿತರರನ್ನು ಹೆಸರಿಸಲು ತನಿಖಾಧಿಕಾರಿಗಳು ಒತ್ತಾಯಿಸಿದ್ದರು ಎಂದು ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಬಹಿರಂಗಪಡಿಸಿದ್ದಾರೆ.
ಇದಕ್ಕಾಗಿ 13 ದಿನ ಅಕ್ರಮ ಬಂಧನದಲ್ಲಿರಿಸಿ ಬರೋಬ್ಬರಿ 24 ದಿನಗಳ ಸತತ ಮಾನಸಿಕ ಶಾರೀರಿಕ ಚಿತ್ರಹಿಂಸೆ ನೀಡಿದ್ದರು ಎಂಬ ಮಾಹಿತಿಯನ್ನು ನೀಡಿದ್ದರು ಎಂದು ಪ್ರಕರಣದಲ್ಲಿ ದೋಷಮುಕ್ತರಾಗಿ ಖುಲಾಸೆಗೊಂಡಿರುವ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್‌ನ ರಾಜಕೀಯ ಸಂಚಿಗೆ ಉನ್ನತ ನಾಯಕರನ್ನು ಸಿಲುಕಿಸುವ ಯತ್ನ ನಡೆದಿತ್ತು. ಆರೆಸ್ಸೆಸ್, ಭಾರತೀಯ ಸೇನೆ ಮತ್ತು ದೇಶರಕ್ಷಕ ಸಂಘಟನೆಗಳ ಹೆಸರು ಕೆಡಿಸುವುದು ಸಂಚಾಗಿತ್ತು. ಇದಕ್ಕಾಗಿ ಎಲ್ಲಾ ತನಿಖಾ ಸಂಸ್ಥೆಗಳನ್ನು ನನ್ನ ವಿರುದ್ಧ ಬಳಸಿತ್ತು. ಸನಾತನ ಧರ್ಮವನ್ನು ನಾಶಪಡಿಸುವುದು ಅದರ ಷಡ್ಯಂತ್ರವಾಗಿತ್ತುಆದರೂ ಸನಾತನ ಗೆದ್ದಿತು ನಾವು ಸತ್ಯದ ದಾರಿಯಲ್ಲಿದ್ದವರು ಸತ್ಯವೇ ನಮ್ಮನ್ನು ಕಾದಿದೆ ಎಂದಿದ್ದಾರೆ

