Home » 20 ವರ್ಷ ಕೋಮಾದಲ್ಲಿದ್ದ ಸೌದಿ ರಾಜಕುಮಾರ ಸಾವು
 

20 ವರ್ಷ ಕೋಮಾದಲ್ಲಿದ್ದ ಸೌದಿ ರಾಜಕುಮಾರ ಸಾವು

by Kundapur Xpress
Spread the love

ರಿಯಾದ್ : ಕಳೆದ 20 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ, ನಿದ್ರಿಸುತ್ತಿರುವ ರಾಜಕುಮಾರ ಎಂದೇ ಖ್ಯಾತರಾಗಿದ್ದ ಸೌದಿ ಅರೇಬಿಯಾ ರಾಜಕುಮಾರ ಅಲ್ ವಾಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ (36 ವರ್ಷ) ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಬ್ರಿಟನ್‌ನ ಸೇನಾ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಸೌದ್ 2005ರಲ್ಲಿ ಲಂಡನ್‌ನಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದರು. ಕಾರು ಅಪಘಾತದ ವೇಳೆ ಮಿದುಳಿಗೆ ಗಂಭೀರ ಗಾಯವಾಗಿದ್ದು ಆಂತರಿಕ ರಕ್ತಸ್ರಾವದಿಂದಾಗಿ ಸೌದಿ ರಾಜಕುಮಾರ ಕೋಮಾ ಸ್ಥಿತಿಗೆ ಹೋಗಿದ್ದರು. ಜಾಗತಿಕ ಇಮಾಮ್ಗಳ ಮಂಡಳಿ (ಜಿಐಸಿ) ರಾಜಕುಮಾರನ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.

 

Related Articles

error: Content is protected !!