60
ನವದೆಹಲಿ : ಹಲವು ಬಾರಿ ಮುಂದೂಡಲ್ಪಟ್ಟ ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷಯಾನ ಬುಧವಾರ ತಡರಾತ್ರಿ ವೇಳೆಗೆ ಕೈಗೂಡುವ ನಿರೀಕ್ಷೆ ಇದೆ. ಶುಕ್ಲಾ ಸೇರಿದಂತೆ ನಾಲ್ವರನ್ನು ಹೊತ್ತ ಅಮೆರಿಕದ ಆ್ಯಕ್ಸಿಯೋಂ ನೌಕೆಯನ್ನು ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ 12.01 ಗಂಟೆಗೆ ಉಡ್ಡಯನ ಮಾಡಲು ನಿರ್ಧರಿಸಲಾಗಿದೆ.
ಈ ಹಿಂದೆ ತಾಂತ್ರಿಕ ಮತ್ತು ಹವಾಮಾನ್ಯ ವೈಪರೀತ್ಯದ ಕಾರಣ ಉಡ್ಡಯನವನ್ನು ಹಲವು ಬಾರಿ ಮುಂದೂಡಲಾಗಿತ್ತು. ಆದರೆ ಇದೀಗ ಸೂಕ್ತ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 12.01ಕ್ಕೆ ನೌಕೆ ಉಡ್ಡಯನಕ್ಕೆ ನಿರ್ಧರಿಸಲಾಗಿದೆ. ನೌಕೆ ಗುರುವಾರ ಸಂಜೆ 4.30ರವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದೆ ಎಂದು ನಾಸಾ ಮಂಗಳವಾರ ಮಾಹಿತಿ ನೀಡಿದೆ

