76
ಮೆಲ್ಲೋರ್ನ್ : ತಾಂತ್ರಿಕ ದೋಷ, ಹುಸಿಬಾಂಬ್ ಬೆದರಿಕೆ, ಹವಾಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದ ವಿಮಾನ ರದ್ದು ಅಥವಾ ಏಳಂಬವಾಗುವುದನ್ನು ನೋಡಿದ್ದೇವೆ. ಆದರೆ ಆಸ್ಟ್ರೇಲಿಯಾದ ವಿಮಾನವೊಂದರಲ್ಲಿ ಹಾವು ಕಂಡು ಬಂದಿದ್ದರಿಂದ ವಿಮಾನ ಪ್ರಯಾಣ ಬರೋಬ್ಬರಿ 2 ಗಂಟೆಗಳ ಕಾಲ ವಿಳಂಬವಾಗಿದೆ
ಮೆಲ್ಲೋರ್ನ್ ವಿಮಾನ ನಿಲ್ದಾಣದಲ್ಲಿ ಬ್ರಿಸ್ಟೇನ್‌ಗೆ ತೆರಳುವ ವರ್ಜಿನ್ ಆಸ್ಟ್ರೇಲಿಯಾ ವಿಮಾನವನ್ನು ಹತ್ತುತ್ತಿದ್ದಾಗ ಅದರ ಸರಕು ವಿಭಾಗದಲ್ಲಿ ಹಾವು ಕಂಡುಬಂದಿದೆ. ತಕ್ಷಣವೇ ಹಾವನ್ನು ಹಿಡಿಯಲಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

