133
ನವದೆಹಲಿ : ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ತುಮಕೂರು ಸಂಸದ ಹಾಗೂ ಕೇಂದ್ರ ಸಚಿವ ಸೋಮಣ್ಣ ಗುರುವಾರ ಭೇಟಿ ಮಾಡಿ ಏಪ್ರಿಲ್‌ನಲ್ಲಿ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಮಹಾಸ್ವಾಮೀಜಿ 118ನೇ ಜನ್ಮ ದಿನೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಗುರುವಂದನಾ ಸಂಭ್ರಮಾಚರಣೆಗೆ ಆಗಮಿಸುವಂತೆ ಆಹ್ವಾನ ನೀಡಿದರು. ರಾಷ್ಟ್ರಪತಿಯವರು ಆಹ್ವಾನ ಸ್ವೀಕರಿಸಿದ್ದು ಅವರ ಕಾರ್ಯಾಲಯ ಸೂಕ್ತ ದಿನಾಂಕ ಶೀಘ್ರ ತಿಳಿಸಲಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

