137
ಹೊಸದಿಲ್ಲಿ : ಪ್ರಖ್ಯಾತ ರಾಷ್ಟ್ರೀಯತಾವಾದಿ ಚಿಂತಕ ಮತ್ತು ಹೆಸರಾಂತ ಬರಹಗಾರ ಸೂರ್ಯಕಾಂತ್ ಬಾಲಿ ನಿಧನ ಹೊಂದಿದರು ಅವರಿಗೆ 82 ವರ್ಷ ವಯಸ್ಸಾಗಿತ್ತು ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಡಾ. ಬಾಲಿ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಡಾ. ಸೂರ್ಯಕಾಂತ್ ಬಾಲಿ ತಮ್ಮ ತೀಕ್ಷ್ಮವಾದ ರಾಷ್ಟ್ರೀಯತಾವಾದಿ ಚಿಂತನೆಯಿಂದ ಹಿಂದಿ ಸಾಹಿತ್ಯವನ್ನು ಪೋಷಿಸಿದರು. ಅವರ ಬರಹಗಳು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸ ಬೆಳಕನ್ನು ತಂದವು. ಅವರು ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಪ್ರಖ್ಯಾತ ವಿದ್ವಾಂಸರಾಗಿದ್ದರು. ಡಾ. ಬಾಲಿ ಅವರ ಪಾಂಡಿತ್ಯಕ್ಕೆ ನಾನು ಗೌರವ ಮತ್ತು ಮೆಚ್ಚುಗೆಯಿಂದ ನಮಸ್ಕರಿಸುತ್ತೇನೆ. ಅಗಲಿದ ಆತ್ಮಕ್ಕೆ ಶಾಂತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ

