68
ಲಖನೌ : ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್ ಮಹಲ್‌ನ ಗುಮ್ಮಟ ಸೋರುತ್ತಿರುವ ಸಂಗತಿ ಪುರಾತತ್ವ ಇಲಾಖೆಯ ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪುರಾತತ್ವ ಇಲಾಖೆಯು ಗುಮ್ಮಟದ ಥರ್ಮಲ್ ಸ್ಕ್ಯಾನಿಂಗ್ ಮಾಡುವಾಗ ಸೋರಿಕೆಯು ಗೊತ್ತಾಗಿದೆ. ಗುಮ್ಮಟದ ಇಟ್ಟಿಗೆಗಳ ಮಧ್ಯೆ ಗಾರೆ ಸವೆತ, ಗುಮ್ಮಟದ ಮುಖ್ಯದ್ವಾರದ ಬಾಗಿಲು ಶಿಥಿಲಾವಸ್ಥೆಗೆ ಹೋಗಿರುವುದು, ನೆಲ ಸವೆದಿರುವುದು ಹಾಗೂ ಗುಮ್ಮಟದ ತುದಿಯಲ್ಲಿರುವ ಕಬ್ಬಿಣವೂ ಸಹ ತುಕ್ಕು ಹಿಡಿದಿರುವುದು ತಿಳಿದು ಬಂದಿದೆ. ಇದಕ್ಕಾಗಿ ಎಎಸ್‌ಐ ಈಗಾಗಲೇ ಕಾಮಗಾರಿ ಆರಂಭಿಸಿದ್ದು, ಮುಕ್ತಾಯಕ್ಕೆ 6 ತಿಂಗಳು ಹಿಡಿಯಲಿದೆ ಎಂದು ಮೂಲಗಳು ತಿಳಿಸಿದೆ.

