ಆಗ್ರಾ : ಪಹಲ್ಲಾಂ ನರಮೇಧದ ಬಳಿಕ ಉತ್ತರ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್‌ಗೆ ಭದ್ರತೆ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಸಂಭಾವ್ಯ ವೈಮಾನಿಕ ಬೆದರಿಕೆಯನ್ನು ಎದುರಿಸಲು ಸಂಕೀರ್ಣದಲ್ಲಿ ಡ್ರೋನ್ ನಿಗ್ರಹ ವ್ಯವಸ್ಥೆ ಅಳವಡಿಸಲು ಮುಂದಾಗಿದೆ.
ತಾಜ್ ಮಹಲ್ ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಉತ್ತರ ಪ್ರದೇಶ ಪೊಲೀಸರ ಕಣ್ಣಾವಲಿನಲ್ಲಿದೆ. ಶೀಘ್ರದಲ್ಲಿ ಈ ಸ್ಮಾರಕ ಹೈಟೆಕ್ ಭದ್ರತೆಗೆ ಒಳಪಡಲಿದ್ದು, ಸುಧಾರಿತ ಡ್ರೋನ್ ತಟಸ್ವೀಕರಣ ತಂತ್ರಜ್ಞಾನ ಹೆಚ್ಚುವರಿ ರಕ್ಷಣೆ ಪಡೆಯಲಿದೆ. ಈ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಅರಿಬ್ ಅಹ್ಮದ್ ಮಾಹಿತಿ ನೀಡಿದ್ದು, ‘ಈ ವ್ಯವಸ್ಥೆಯು 7-8 ಕಿಮೀ ವ್ಯಾಪ್ತಿ ಹೊಂದಿದ್ದು, ಆದರೆ ಪ್ರಾಥಮಿಕವಾಗಿ ಸ್ಮಾರಕದ ಗುಮ್ಮಟದಿಂದ 200 ಮೀ. ವ್ಯಾಪ್ತಿ ತನಕ ಪರಿಣಾಮಕಾರಿಯಾಗಿರಲಿದೆ. ಡ್ರೋನ್ ಸಿಗ್ನಲ್‌ನ್ನು ಸ್ವಯಂಚಾಲಿತವಾಗಿ ಜಾಮ್ ಮಾಡುತ್ತದೆ, ಸಾಪ್ಟ್ ಕಿಲ್ ಮೂಲಕ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ವ್ಯವಸ್ಥೆ ನಿರ್ವಹಣೆಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ.

