Home » ಭಾರತದ ಜತೆ ಮಾತುಕತೆ ಇಲ್ಲ : ಟ್ರಂಪ್
 

ಭಾರತದ ಜತೆ ಮಾತುಕತೆ ಇಲ್ಲ : ಟ್ರಂಪ್

by Kundapur Xpress
Spread the love

ವಾಷಿಂಗ್ಟನ್ :’ತೆರಿಗೆ ವಿವಾದ ಪರಿಹಾರ ಆಗುವವರೆಗೂ ಭಾರತದ ಜತೆಗೆ ವ್ಯಾಪಾರ ವಿಚಾರದಲ್ಲಿ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆ.25 ರಂದು ಭಾರತ-   ಅಮೆರಿಕ ಮುಂದಿನ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುವುದೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈಗಾಗಲೇ ಅಮೆರಿಕವು ಶೇ.50ರಷ್ಟು ತೆರಿಗೆ ಹಾಕಿದೆ. ಇನ್ನಾದರೂ ಭಾರತದ ಜತೆಗೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆ ನಡೆಯಲಿದೆಯಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತೆರಿಗೆಗೆ ಸಂಬಂಧಿಸಿದ ವಿವಾದ ಬಗೆಹರಿವವರೆಗೂ ಯಾವುದೇ ಮಾತುಕತೆ ಇಲ್ಲ ಎಂದು ತಿಳಿಸಿದರು.

ರಷ್ಯಾದಿಂದ ತೈಲ ಆಮದು ಮಾಡಿಕೊ ಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರವಷ್ಟೇ ಅಮೆರಿಕ ಸರ್ಕಾರವು ಭಾರತದ ಮೇಲೆ ಈಗಾಗಲೇ ವಿಧಿಸಿರುವ ಶೇ.25ರಷ್ಟು ತೆರಿಗೆಯ ಜತೆಗೆ ಹೆಚ್ಚುವರಿ ಶೇ.25 ಮೇಲ್ತರಿಗೆ ಹಾಕಿದೆ. 21 ದಿನಗಳ ಬಳಿಕ ಈ ತೆರಿಗೆ ಜಾರಿಗೆ  ಬರಲಿದೆ.

 

Related Articles

error: Content is protected !!