206
ಅಮರಾವತಿ : ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಕುಸಿತವಾಗುತ್ತಿದೆ ಎಂಬ ಆತಂಕದ ನಡುವೆಯೇ ವಿಜಯನಗರದ ಸಂಸದ ಕಾಳಿಸೆಟ್ಟಿ ಅಪ್ಪಲ ನಾಯ್ಡು, ‘ನನ್ನ ಕ್ಷೇತ್ರದಲ್ಲಿ 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ತಲಾ 50,000 ರು. ಆರ್ಥಿಕ ನೆರವು ನೀಡುವೆ’ ಎಂದು ಘೋಷಿಸಿದ್ದಾರೆ. ಅಲ್ಲದೇ ‘ಗಂಡು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಹಸುವನ್ನು ನೀಡಲಾಗುವುದು. ಹೆಣ್ಣು ಮಗು ಜನಿಸಿದರೆ, ನಾನು ನೀಡುವ 50 ಸಾವಿರ ಹಣ ಎಫ್‌ಡಿ ಮಾಡಲಾಗುವುದು. ಆ ಮಗು 18 ವರ್ಷ ಆದಾಗ 10 ಲಕ್ಷ ರು. ಲಭಿಸಲಿದೆ’ ಎಂದೂ ಹೇಳಿದ್ದಾರೆ. ‘ಮಕ್ಕಳ ಸಂಖ್ಯೆ ಲೆಕ್ಕಿಸದೆ ಎಲ್ಲಾ ಮಹಿಳಾ ನೌಕರರಿಗೆ ಹೆರಿಗೆ ರಜೆ ನೀಡಲಾಗು ವುದು’ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.

