94
ಟೆಲ್ ಅವಿವ್ : ಇಸ್ರೇಲ್‌ನ ಟೆಲ್ ಅವಿವ್ ವಿಮಾನ ಅಂತಾರಾಷ್ಟ್ರೀಯ ನಿಲ್ದಾಣದ ಮೇಲೆ ಭಾನುವಾರ ಯೆಮೆನ್ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ರನ್‌ವೇನಿಂದ ಕೇವಲ 75 ಮೀ. ದೂರದಲ್ಲಿ ಕ್ಷಿಪಣಿ ಬಿದ್ದು, 25 ಮೀ. ಆಳದ ಕಂದಕ ಸೃಷ್ಟಿಯಾಗಿದೆ ಹಾಗೂ ಇಬ್ಬರಿಗೆ ಗಾಯವಾಗಿದೆ. ಇದರ ಬೆನ್ನಲ್ಲೇ ತಾತ್ಕಾಲಿಕವಾಗಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಈ ನಡುವೆ ದಾಳಿಗೆ ಕಿಡಿಕಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಹೌತಿ ಉಗ್ರರ ಒಂದಲ್ಲ. ಬಹುದಾಳಿ ನಡೆಸಿ ಪ್ರತೀಕಾರ ತೀರಿಸಿಕೊಳ್ಳುತೇವೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ, ‘ನಮಗೆ ಹಾನಿ ಮಾಡಿದವರ ಮೇಲೆ 7 ಪಟ್ಟು ದಾಳಿ ನಡೆಸುತ್ತೇವೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ಗುಡುಗಿದ್ದಾರೆ

