151
ಕರಾಚಿ : ಲಷ್ಕರ್ ಎ ತೊಯ್ದಾ ಉಗ್ರ ಸಂಘ ಟನೆಯ ಹಣಕಾಸು ವಹಿವಾಟು ನೋಡಿಕೊ ಳ್ಳುತ್ತಿದ್ದ ಉಗ್ರ ಹಫೀಜ್ ಸಯೀದ್‌ನ ಬಲಗೈ ಬಂಟನೊಬ್ಬ ಕರಾಚಿಯಲ್ಲಿ ನಿಗೂಢ ವ್ಯಕ್ತಿಗಳ ಗುಂ ಡಿನ ದಾಳಿಗೆ ಬಲಿಯಾಗಿದ್ದಾನೆ ಮೃತನನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಈವರೆಗೆ ವಿದೇಶಿ ನೆಲದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾದವರ ಸಂಖ್ಯೆ 27 ಕ್ಕೇರಿದೆ
ಈತ ಎಲ್‌ಇಟಿಗೆ ವಿವಿಧ ಮೂಲಗಳಿಂದ ನಿಧಿ ಸಂಗ್ರಹಿಸಿ ಆರ್ಥಿಕ ನೆರವಿನ ವ್ಯವಸ್ಥೆ ಮಾಡುತ್ತಿದ್ದು ಕರಾಚಿಯಲ್ಲಿ ಪ್ರಭಾವಿಯಾಗಿದ್ದ.ರೆಹಮಾನ್ ಅಂಗಡಿಯಲ್ಲಿ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಆತನ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಮಾ.16ರಂದು ಹಫೀಜನ ಆಪ್ತ ಅಬುಕತಲ್ ಎಂಬಾತನ್ನು ಗುಂಡಿಕ್ಕಿ ಕೊಲ್ಲಲಾ ಗಿತ್ತು. ಅದರ ಬೆನ್ನಲ್ಲೇ ಇದೀಗ ಆತನ ಮತ್ತೊಬ್ಬ ಆಪ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

