Home » ಇಂದು ಉಗ್ರ ರಾಣಾ ಭಾರತಕ್ಕೆ
 

ಇಂದು ಉಗ್ರ ರಾಣಾ ಭಾರತಕ್ಕೆ

by Kundapur Xpress
Spread the love

ನವದೆಹಲಿ : ಮುಂಬೈ ಉಗ್ರ ದಾಳಿಯ ಆರೋಪಿ ತಹವುರ್‌ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಗುರುವಾರ ಆತನನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ.

ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ ರಾಣಾ ಗಡಿಪಾರು ವಿಚಾರದ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಜತೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಗಡಿಪಾರು ಪ್ರಕ್ರಿಯೆಗೆ ತಡೆ ಕೋರುವಂತೆ ತಹವುರ್‌ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಣಾ ಗಡಿಪಾರಿಗೆ ಸಿದ್ಧತೆಗಳು ನಡೆದಿದ್ದು, ವಿಶೇಷ ವಿಮಾನದಲ್ಲಿ ಆತನನ್ನು ಭಾರತಕ್ಕೆ ಕರೆತರಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ

 

Related Articles

error: Content is protected !!