ಅಹಮದಾಬಾದ್ : 1.07 ಕೋಟಿ ರು. ಮೌಲ್ಯದ ಕಳ್ಳತನ ಪ್ರಕರಣ ಭೇದಿಸಿದ ಡಾಬರ್ಮನ್ ಪೊಲೀಸ್ ನಾಯಿಯು, ಇಬ್ಬರು ಕಳ್ಳರ ಪತ್ತೆ ಮಾಡಲು ಪೊಲೀಸರಿಗೆ ಸಹಕರಿ ಸಿದ ಪ್ರಸಂಗ ಗುಜರಾತ್ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ನಾಯಿ ‘ಪೆನ್ನಿ’ ಸಹಾಯದಿಂದ ಕಳವಾದ ಎಲ್ಲ ಹಣ ಜಪ್ಪು ಮಾಡಿ ಬುಢಾ ಸೋಲಂಕಿ ಹಾಗೂ ವಿಕ್ರಂ ಸೋಲಂಕಿ ಎಂಬ ಇಬ್ಬರನ್ನು ಬಂಧಿಸಲಾಗಿದೆ
ಸರ್ಗಾವಾಲಾ ಗ್ರಾಮದ ಗ್ರಾಮದ 52 ವರ್ಷದ ರೈತನೊಬ್ಬ ಜಮೀನು ಮಾರಿ ಬಂದ 1:07 ಕೋಟಿ ರು. ಹಣ ಮನೆಯಲ್ಲಿ ಇಟ್ಟಿದ್ದ ಇತ್ತೀಚೆಗೆ ಆತ ಮನೆ ಬೀಗ ಹಾಕಿ ಊರಿಗೆ ಹೋಗಿದ್ದ ಈ ವೇಳೆ ವಿಷಯ ತಿಳಿದಿದ್ದ ಬುಢಾ ಹಾಗೂ ವಿಕ್ರಂ, ಮನೆಗೆ ಕನ್ನ ಹಾಕಿ ಹಣವನ್ನು ಕದ್ದಿದ್ದರು. ಆಗ ಪೊಲೀಸರು ನಾಯಿ ಬಳಸಿ ತನಿಖೆ ಆರಂಭಿಸಿದಾಗ ಅದು ಬುಢಾ ಮನೆ ಬಳಿ ನಿಂತಿತು ಹಾಗೂ ಆತನನ್ನು ಮೂಸಿ ಬೊಗಳಿತು ವಿಚಾರಣೆ ವೇಳೆ ಬುಢಾ ತಪ್ರೊಪ್ಪಿಕೊಂ ಡಿದ್ದು, ಕೃತ್ಯಕ್ಕೆ ವಿಕ್ರಂ ಸಹಕರಿಸಿದ್ದಾಗಿ ಹೇಳಿದ್ದಾನೆ. ಇಬ್ಬರೂ ಹಂಚಿಕೊಂಡಿದ್ದ ತಲಾ 53.50 ಲಕ್ಷ ರು. (ಒಟ್ಟು 1.07 ಕೋಟಿ ರು.) ವಶಪಡಿಸಿಕೊಳ್ಳಲಾಗಿದೆ