ನವದೆಹಲಿ : ವಿಮಾನಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಹಾಕುವ ಘಟನೆಗಳು ಭಾನುವಾರವೂ ಮುಂದುವರೆದಿದ್ದು, 25 ವಿಮಾನಗಳಿಗೆ ಇಂಥ ಸಂದೇಶ ರವಾನಿಸಲಾಗಿದೆ. ಶಿಷ್ಟಾಚಾರದ ಅನ್ವಯ ಎಲ್ಲಾ ವಿಮಾನಗಳನ್ನೂ ನಿಲ್ದಾಣಗಳಲ್ಲಿ ಇಳಿದ ಬಳಿಕ ಪ್ರತ್ಯೇಕ ಸ್ಥಳದಲ್ಲಿ ಇರಿಸಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಎಲ್ಲವೂ ಹುಸಿ ಬೆದರಿಕೆ ಕರೆ ಎಂದು ಖಚಿತಪಟ್ಟಿದೆ.
ಇದೇ ವೇಳೆ, ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣಕ್ಕೂ ಶನಿವಾರ ಮತ್ತು ಭಾನುವಾರ ಬೆದರಿಕೆ ಇ-ಮೇಲ್ ರವಾನಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೂಡ ಇಂಡಿಗೋ ವಿಮಾನದಲ್ಲಿ 12 ಬಾಂಬರ್ ಇದ್ದಾರೆ’ ಎಂಬ ಬೆದರಿಕೆ ಬಂದಿದೆ.