ನವದೆಹಲಿ : ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕುವ ಕುಕೃತ್ಯಗಳು ಮಂಗಳವಾರವೂ ಮುಂದುವರಿದಿವೆ. ಭಾರತದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 79 ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ರವಾನಿಸಲಾ ಗಿದೆ. ಇದರೊಂದಿಗೆ ಕಳೆದ 9 ದಿನದಲ್ಲಿ 170 ಬೆದರಿಕೆಗಳು ಬಂದಂತಾಗಿದೆ.
ಇಂಡಿಗೋ (23), ವಿಸ್ತಾರ(21), ಆಕಾಸಾ (12) ಏರ್ ಇಂಡಿಯಾ (23) ವಿಮಾನಗಳಿಗೆ ಈ ಸಂದೇಶ ಬಂದಿವೆ. ಇವುಗಳಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಕೂಡ ಸೇರಿವೆ. ಅಂತಾರಾಷ್ಟ್ರೀಯ ವಿಮಾನಗಳ ಪೈಕಿ ಸೌದಿ ಅರೇಬಿಯಾದ ಜೆಡ್ಡಾಗೆ ಹೋಗುತ್ತಿದ್ದ 3 ಇಂಡಿಗೋ ವಿಮಾನಗಳನ್ನು ಸೌದಿ ಅರೇಬಿಯಾ ಹಾಗೂ ಕತಾರ್ನ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಗಿದೆ