Home » ಯೋಗಿಗೆ ಬೆದರಿಕೆ : ಮಹಿಳೆ ಬಂಧನ
 

ಯೋಗಿಗೆ ಬೆದರಿಕೆ : ಮಹಿಳೆ ಬಂಧನ

by Kundapur Xpress
Spread the love

ಮುಂಬೈ : 10 ದಿನಗಳೊಳಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ಬಾಬಾ ಸಿದ್ದಿಕಿಯ ರೀತಿ ಹತ್ಯೆ ಮಾಡಲಾಗುವುದು’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಬಂದಿದೆ. ಇದರ ಬೆನ್ನಲ್ಲೇ ಬೆದರಕೆ ಹಾಕಿದ್ದ ಮಹಿಳೆಯನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ

ಮಹಿಳೆಯನ್ನು ಥಾಣೆ ಜಿಲ್ಲೆಯ ಸಮೀಪದ ಉಲ್ಲಾಸ ನಗರ ನಿವಾಸಿ ಫಾತಿಮಾ ಖಾನ್‌ ಎಂದುಗುರುತಿಸಲಾಗಿದೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸರು ಹೇಳಿದ್ದಾರೆ

ಉ.ಪ್ರ. ಸಿಎಂಗೆ ಭದ್ರತೆ ಹೆಚ್ಚಳ

ಮುಂದಿನ 10 ದಿನಗಳ ಒಳಗೆ ರಾಜೀನಾಮೆ ನೀಡದಿದ್ದರೆ ಅವರನ್ನು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಯವರನ್ನು ಕೊಂದಂತೆ ಹತ್ಯೆ ಮಾಡಲಾಗುತ್ತದೆ’ ಎಂಬ ಸಂದೇಶ ಮುಂಬೈ ಸಂಚಾರ ಪೊಲೀಸರಿಗೆ ಶನಿವಾರ ಬಂದಿತ್ತು. ಆಗ ತನಿಖೆ ವೇಳೆ ಫಾತಿಮಾ ಹೆಸರು ಗೊತ್ತಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಯೋಗಿ ನ.20ರಂದು ರಾಜ್ಯಕ್ಕೆ ಆಗಮಿಸಲಿದ್ದು, ಬೆದರಿಕೆ ಕಾರಣ ಅವರ ಭದ್ರತೆಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

   

Related Articles

error: Content is protected !!