Home » ಯುದ್ದ ನಿಲ್ಲಿಸಿದ್ದು ನಾನಲ್ಲ : ಟ್ರಂಪ್
 

ಯುದ್ದ ನಿಲ್ಲಿಸಿದ್ದು ನಾನಲ್ಲ : ಟ್ರಂಪ್

by Kundapur Xpress
Spread the love

ವಾಷಿಂಗ್ಟನ್ : ಪಾಕಿಸ್ತಾನ ಮತ್ತು ಭಾರತ ನಡುವಿನ ಕದನ ವಿರಾಮಕ್ಕೆ ತನ್ನ ಮಧ್ಯಸ್ಥಿಕೆಯೇ ಕಾರಣ ಎಂದು ಬರೋಬ್ಬರಿ 15 ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಉಲ್ಟಾ ಹೊಡೆದಿದ್ದಾರೆ  ಪರಮಾಣು ಸಮರಕ್ಕೆ ಕಾರಣವಾಗಬಹು ದಾಗಿದ್ದ ಯುದ್ದಕ್ಕೆ ಎರಡೂ ದೇಶಗಳ ಚತುರ ನಾಯಕರು ಸೇರಿಕೊಂಡು ಬ್ರೇಕ್ ಹಾಕುವ ನಿರ್ಧಾರ ತೆಗೆದುಕೊಂಡರು ಎಂದು ಟ್ರಂಪ್ ಹೇಳಿದ್ದಾರೆ.

ಈ ಮೂಲಕ ಇದೇ ಮೊದಲ ಬಾರಿಗೆ ತಮ್ಮ ಮಧ್ಯಸ್ಥಿಕೆಯನ್ನು ತಾವೇ ತಳ್ಳಿ ಹಾಕಿದ್ದಾರೆ. ವಿಶೇಷವೆಂದರೆ ಎರಡೂ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು ತಾವೇ ಎಂದು ಟ್ರಂಪ್ ಬುಧವಾರ ಬೆಳಗ್ಗೆ ಹೇಳಿದ್ದರು. ಅದಾದ ಬೆನ್ನಲ್ಲೇ ಟ್ರಂಪ್ ಭಾರತದ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದರು.

ಈ ವೇಳೆ ಕದನ ವಿರಾಮದಲ್ಲಿ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆ ಆಗಿಲ್ಲ ಯುದ್ಧ ಸ್ಥಗಿತಕ್ಕೆ ಪಾಕಿಸ್ತಾನ ಮನವಿ ಮಾಡಿದ ಕಾರಣವೇ ನಾವು ಯುದ್ಧ ನಿಲ್ಲಿಸಿದ್ದೆವು ಎಂದು ಮೋದಿ ಕಟು ನುಡಿಗಳಲ್ಲಿ ಟ್ರಂಪ್‌ಗೆ ಸಂದೇಶ ರವಾನಿಸಿದ್ದರು. ಅದರ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ಜೊತೆಗೆ ಔತಣಕೂಟ ನಡೆಸಿದ ಟ್ರಂಪ್, ಬಳಿಕ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನದ ನಾಯಕರೇ ಕಾರಣ ಎಂದು ಹೇಳಿದ್ದಾರೆ. ಅವರು ಇಂಥ ಹೇಳಿಕೆ ನೀಡಿದ್ದು ಇದೇ ಮೊದಲು

 

Related Articles

error: Content is protected !!