Home » ಭಾರತದ್ದು ಡೆಡ್‌ ಎಕಾನಮಿ ಎಂದು ಟ್ರಂಪ್‌ ಅಸೂಯೆ
 

ಭಾರತದ್ದು ಡೆಡ್‌ ಎಕಾನಮಿ ಎಂದು ಟ್ರಂಪ್‌ ಅಸೂಯೆ

ವಿಶ್ವದಲ್ಲೇ ಭಾರತದ್ದು 4ನೇ ಬಲಿಷ್ಠ ಆರ್ಥಿಕತೆ

by Kundapur Xpress
Spread the love

ವಾಷಿಂಗ್ಟನ್ : ವ್ಯಾಪಾರ ಒಪ್ಪಂದ ಕುರಿತ ಚೌಕಾಸಿಗೆ ವಿರೋಧ ವ್ಯಕ್ತಪಡಿಸಿ ಭಾರತದ ಮೇಲೆ ಶೇ.25ರಷ್ಟು ತೆರಿಗೆ ಮತ್ತು ರಷ್ಯಾದಿಂದ ತೈಲ ಖರೀದಿಗೆ ದಂಡ ವಿಧಿಸುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ್ದು ಡೆಡ್ ಎಕಾನಮಿ (ಮೃತ ಆರ್ಥಿಕತೆ) ಎಂದು ಟೀಕಿಸಿದ್ದಾರೆ. ಅಲ್ಲದೆ ಭಾರತ- ರಷ್ಯಾ ನಡುವಿನ ವ್ಯಾಪಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಎರಡೂ ದೇಶಗಳು ತಮ್ಮ ‘ಡೆಡ್ ಎಕಾನಮಿಯನ್ನು ಒಟ್ಟಾಗಿ ಮುಳುಗಿಸಬಹುದು ಎಂದು ಹೇಳಿದ್ದಾರೆ.

ಭಾರತದ ಕುರಿತ ಈ ಆಕ್ಷೇಪಾರ್ಹ ಹೇಳಿಕೆಯನ್ನು ಲೋಕಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಲವಾಗಿ ಸಮರ್ಥಿಸಿಕೊಂಡಿದ್ದರೆ, ರಾಹುಲ್ ಹೇಳಿಕೆ ಬಗ್ಗೆ ಬಿಜೆಪಿ ಕಿಡಿಕಾರಿದೆ.

ಪ್ರಸಕ್ತ ಭಾರತ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, 2030ರ ವೇಳೆಗೆ 3ನೇ ಸ್ಥಾನಕ್ಕೆ ಏರಲಿದೆ ಎಂದು ಹಲವು ಜಾಗತಿಕ ಆರ್ಥಿಕಸಂಸ್ಥೆಗಳು ಸಂಸ್ಥೆಗಳು ಭವಿಷ್ಯ ನುಡಿದಿವೆ.

ಜೊತೆಗೆ ಹಲವು ವರ್ಷಗಳಿಂದ ಭಾರತವು, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ವಿಶ್ವದಲ್ಲೇ ಅತಿವೇಗದ ಬೆಳವಣಿಗೆ ಕಾಣು ತ್ತಿರುವ ಆರ್ಥಿಕತೆ  ಎಂಬ ಹಿರಿಮೆಗೂ ಪಾತ್ರವಾಗಿದೆ

 

Related Articles

error: Content is protected !!