Home » ರಷ್ಯಾದ ವಿಕ್ಟರಿ ಡೇ : ಮೋದಿಗೆ ಆಹ್ವಾನ
 

ರಷ್ಯಾದ ವಿಕ್ಟರಿ ಡೇ : ಮೋದಿಗೆ ಆಹ್ವಾನ

by Kundapur Xpress
Spread the love

ನವದೆಹಲಿ : ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿ ವಿರುದ್ಧ ವಿಜಯ ಸಾಧಿಸಿದ್ದರ ಕುರಿತ 80ನೇ ವರ್ಷಾಚರಣೆ ಸಮಾರಂಭಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಆಹ್ವಾನ ನೀಡಿದೆ. ಈ ಕುರಿತು ರಷ್ಯಾದ ಉಪ ವಿದೇಶಾಂಗ ಸಚಿವ ಆ್ಯಂಡ್ರೆ ರುಡೆಂಕೊ ಮಾಹಿತಿ ನೀಡಿದ್ದಾರೆ

ಮೇ 9ರಂದು ನಡೆಯಲಿರುವ ಈ ಸಲದ ವಿಕ್ಟರಿ ಡೇ ಪರೇಡ್‌ಗೆ ವಿವಿಧ ದೇಶಗಳ ನಾಯಕರನ್ನು ಆಹ್ವಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ 2024ರ ಜುಲೈನಲ್ಲಿ ಪ್ರಧಾನಿ ರಷ್ಯಾಗೆ ಭೇಟಿ ನೀಡಿದ್ದರು

 

Related Articles

error: Content is protected !!