109
ನವದೆಹಲಿ : ವಕ್ಸ್ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯಲ್ಲಿ ಎಲ್ಲರಿಗೂ ಅವಕಾಶ ನೀಡುವ, ಅದರ ಸರ್ವಾಧಿಕಾರಕ್ಕೆ ಕತ್ತರಿ ಹಾಕುವ ಬಹು ನಿರೀಕ್ಷಿತ ವಕ್ಸ್ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನ ಅನುಮೋದನೆ ಸಿಗುವ ಕ್ಷಣ ಸನ್ನಿಹಿತವಾಗಿದೆ. ಬುಧವಾರತಡರಾತ್ರಿವರೆಗೂ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಸೂದೆ 288 ಮತ ಪಡೆದು ಬಹುಮತದಿಂದ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೇ ವಿಧೇಯಕವನ್ನು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ತಡರಾತ್ರಿವರೆಗೂ ಚರ್ಚೆ ನಡೆದಿದೆ ಹಾಗೂ ಅಂಗೀಕಾರವಾಗಿದೆ ಎಂದು ತಿಳಿದು ಬಂದಿದೆ
ಲೋಕಸಭೆಯಂತೆ ರಾಜ್ಯಸಭೆಯಲ್ಲೂ ವಿಪಕ್ಷಗಳ ಸದಸ್ಯರು ವಕ್ಸ್ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ವಿರೋಧಿಸಿದರೆ, ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬಲವಾಗಿ ಸಮರ್ಥನೆ ಮಾಡಿದ ಕಾರಣ ಗುರುವಾರದ ಕಲಾಪ ಭಾರೀ ಪ್ರಮಾಣದಲ್ಲಿ ಕಾವೇರಿತ್ತು.

