49
ನವದೆಹಲಿ : ಚೀನಾದ ವಿದೇಶಾಮಗ ಸಚಿವ ವಾಂಗ್ ಯಿ 2 ದಿನಗಳ ಭೇಟಿಗಾಗಿ ಇಂದು ಸೋಮವಾರ ಭಾರತಕ್ಕೆ ಆಗಮಿಸಲಿದ್ದಾರೆ. ಉಭಯ ದೇಶಗಳ ನಡುವಿನ ಗಡಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಈ ಭೇಟಿ ನಡೆಯುತ್ತಿದೆ ಎಂದು ಎರಡೂ ದೇಶಗಳು ಹೇಳಿವೆ.
ಆದರೆ ಅಮೆರಿಕದ ತೆರಿಗೆ ದಾಳಿಯಿಂದ ಆಕ್ರೋಶಗೊಂಡಿರುವ ಭಾರತ, ಚೀನಾ, ರಷ್ಯಾ ಒಂದಾಗುತ್ತಿವೆ ಎಂಬ ವರದಿಗಳ ಬೆನ್ನಲ್ಲೇ, ಭಾರತದ ಪ್ರಧಾನಿ ಮೋದಿ ಚೀನಾ ಭೇಟಿಗೂ ಮುನ್ನ ವಾಂಗ್ ಆಗಮನ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಭೇಟಿ ವೇಳೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಸಿ) ಇರುವ ಸದ್ಯದ ಪರಿಸ್ಥಿತಿ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ವಾಂಗ್ ಚರ್ಚೆ ನಡೆಸಲಿದ್ದಾರೆ.
2020ರ ಗಲ್ವಾನ್ ಸಂಘರ್ಷದ ಬಳಿಕ ಚೀನಾ ಹಾಗೂ ಭಾರತದ ಸಂಬಂಧ ಹಳಸಿತ್ತು. ಇದೀಗ ವಿಶ್ವಾಸ ವೃದ್ಧಿಯ ಪ್ರಯತ್ನದಲ್ಲಿವೆ.

