Home » ನಾಳೆ ಏನೇನು ನಡೆಯುತ್ತೆ ?
 

ನಾಳೆ ಏನೇನು ನಡೆಯುತ್ತೆ ?

by Kundapur Xpress
Spread the love

ವಾಯುದಾಳಿ ಎಚ್ಚರಿಕೆಯ ಸೈರನ್

ಶತ್ರುಗಳ ವಾಯು ದಾಳಿ ವೇಳೆ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧ ಸೈರನ್ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲಾಗುತ್ತದೆ.

ಯುದ್ಧ ವೇಳೆ ರಕ್ಷಣೆ ಕುರಿತು ತರಬೇತಿ

ಪ್ರತಿಕೂಲ ದಾಳಿ ವೇಳೆ ರಕ್ಷಿಸಿಕೊಳ್ಳುವ ವಿಧಾನ ಬಗ್ಗೆ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಪೀಳಿಗೆಯು ಎಂದಿಗೂ ಯುದ್ಧವನ್ನು ನೋಡಿಲ್ಲ ಹೀಗಾಗಿ ಇದು ಮುಖ್ಯವಾಗಿದೆ.

ರಾತ್ರಿ ಹೊತ್ತಲ್ಲಿ ವಿದ್ಯುತ್ ದೀಪ ಆಫ್

ವಯು ದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ಇದರ ಪರೀಕ್ಷೆ ಈಗ ನಡೆಯಲಿದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

ಪ್ರಮುಖ ಸ್ಥಾವರಗಳ ಮರೆ ಮಾಚುವಿಕೆ

ನಮ್ಮ ದೇಶದಲ್ಲಿನ ಪ್ರಮುಖ ಸ್ಥಾವರಗಳು ಸುರಕ್ಷಿತವಾಗಿರುವುದನ್ನು ಮತ್ತು ಶತ್ರುಗಳ ಬಾಂಬ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

ಸ್ಥಳಾಂತರ ಯೋಜನೆ ಪೂರ್ವಾಭ್ಯಾಸ

ದುರ್ಗಮ ಪ್ರದೇಶಗಳಿಂದ ನಾಗರಿಕರನ್ನು ಹೇಗೆ ಸ್ಥಳಾಂತರಿಸಬಹುದು ಮತ್ತು ರಕ್ಷಿಸಬಹುದು ಎಂಬುದನ್ನು ಪರೀಕ್ಷಿಸಲು ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ.

 

Related Articles

error: Content is protected !!