Home » ಸರ್ವರಿಗೂ ಗುರು ಪೌರ್ಣಮಿಯ ಹಾರ್ದಿಕ ಶುಭಾಶಯಗಳು
 

ಸರ್ವರಿಗೂ ಗುರು ಪೌರ್ಣಮಿಯ ಹಾರ್ದಿಕ ಶುಭಾಶಯಗಳು

by Kundapur Xpress
Spread the love

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ, ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ. ಗುರು ಈ ಪದದ ಅರ್ಥವೇ ಅಜ್ಞಾನ ಎಂಬ ಅಂಧಕಾರವನ್ನು ದೂರ ಮಾಡುವಂತಹ ವ್ಯಕ್ತಿ ಎಂದು  ಭಾರತದಲ್ಲಿ ಗುರುವಿಗೆ ಅತ್ಯಂತ ಪೂಜ್ಯನೀಯ ಸ್ಥಾನವಿದೆ. ಗುರುಪೂರ್ಣಿಮೆ ಇದು ಗುರುವಿಗೆ ಪೂಜೆ ಸಲ್ಲಿಸುವಂತಹ ದಿನ. ತನ್ನ ಗುರುಗಳನ್ನು ಆರಾಧನೆ ಮಾಡುವಂತಹ ದಿನ ಎಂದು ಕೂಡ ಹೇಳಬಹುದು.

ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ

ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಕೆಲವರು ವೇದವ್ಯಾಸ ಗುರುಗಳ ಜನ್ಮದಿನವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.
ಒಟ್ಟಾರೆ ಹೇಳುವುದಾದರೆ ಗುರುಪೂರ್ಣಿಮೆಯು ಗುರುಗಳ ಮತ್ತು ಶಿಷ್ಯನ ನಡುವಿನ ಸಂಬಂಧದ ಬಂಧವನ್ನು
ಬಲಪಡಿಸುವ ದಿನವಾಗಿದೆ ಸರ್ವರಿಗೂ ಗುರು ಪೌರ್ಣಮಿಯ ಹಾರ್ದಿಕ ಶುಭಾಶಯಗಳು

ಪ್ರದೀಪ್‌ ಕುಮಾರ್‌, ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!