Home » ನಿಸರ್ಗ ರಮಣೀಯ ಪ್ರವಾಸಿಧಾಮ – ಮರವಂತೆ !!
 

ನಿಸರ್ಗ ರಮಣೀಯ ಪ್ರವಾಸಿಧಾಮ – ಮರವಂತೆ !!

by Kundapur Xpress
Spread the love

ನಿಸರ್ಗ ರಮಣೀಯ ಪ್ರವಾಸಿಧಾಮ ಮರವಂತೆ……

ಕು0ದಾಪುರ. ಒಂದು ಕಡೆ ಭೋರ್ಗರೆಯುತ್ತ ಆಳೆತ್ತರದ ಬಂಡೆಗಳೊಂದಿಗೆ ಅಬ್ಬರಿಸುವ ಕಡಲು,ಅದರ ಮಗ್ಗುಲಲ್ಲೇ ಪ್ರಶಾಂತವಾಗಿ ಜುಳು ಜುಳು ಹರಿಯುವ ಸೌಪರ್ಣಿಕೆ,ನಡುವೆ ನದಿ ಕಡಲುಗಳೆರಡನ್ನು ಸೀಳಿಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿ.ಇದು ಕುಂದಾಪುರದ ಮರೆಯಲಾಗದ ನಿಸರ್ಗ ರಮಣೀಯ ಪ್ರವಾಸಿಧಾಮ ಮರವಂತೆ…ಒಂದು ಕಡೆ ರುದ್ರ ರಮಣೀಯ ಕಡಲು ಇನ್ನೋಂದೆಡೆ ಹಾಲ್ನೊರೆಯ ಗಂಭೀರ ನದಿಯ ಈ ಮೆರವಣಿಗೆ ಸುಮಾರು 2 ಕಿಲೋಮೀಟರಿನಷ್ಟು ದೂರ, ನಿಸರ್ಗರಮಣಿ ತನ್ನೆಲ್ಲಾ ಸೌಂದರ್ಯವನ್ನು ಇಲ್ಲಿಯೆ ಚೆಲ್ಲಿರಬೇಕು ಹಾಗಾಗಿ ಯಾವ ಪ್ರಕೃತಿ ಪ್ರೇಮಿಯೂ ಮರೆಯುವಂತಿಲ್ಲ ಬದುಕಿನಲ್ಲಿ ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುವ ತುಡಿತವೇ ಸುಂದರ ಕಡಲ ಕಿನಾರೆ ಈ ಮರವಂತೆ.

 

ಮರವಂತೆ ಬೀಚಿಗೆ ಮತ್ತೋಂದು ಹೆಸರು ಮಾರಸ್ವಾಮಿ ಇದಕ್ಕೆ ಕಾರಣ ಇಲ್ಲಿನ ವರಾಹ ಸ್ವಾಮಿ ದೇವಾಲಯ ಈದೆ ನಂಟು ಪಡೆದ ಮರವಂತೆಯ ಈ ಕಡಲ ಕಿನಾರೆ ಮಾರಸ್ವಾಮೀ ಎಂದೇ ಪ್ರಸಿದ್ಧಿ ಪಡೆದಿದೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೇಲೆ ನಿಂತು ನೋಡುವವರಿಗೆ ಎಕಕಾಲದಲ್ಲಿ ಒಂದು ಮಗ್ಗುಲಲ್ಲಿ ತೆಂಗಿನ ತೋಟಗಳ ನಡುವೆ ಬಳುಕುತ್ತಾ ಹರಿಯುವ ಸೌಮ್ಯ ಸ್ವಭಾವದ ಸಿಹಿ ನೀರಿನ ಈ ನೀಲ ನದಿಯು ಮೋಹಕ ಸ್ವಪ್ನದಂತಿದ್ದರೆ ಪಕ್ಕದ ನೀಲ ಮೇಘಶ್ಯಾಮ ಕಡಲು ಪ್ರಕೃತಿಯ ಅಸದೃಶ ಪವಾಡವೆನಿಸಿದೆ ಇವೆರಡನ್ನೂ ಸಿಳಿಕೊಂಡು ಸಾಗುವ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಆಧುನಿಕ ತಂತ್ರಜ್ಙಾನಕ್ಕೊಂದು ನಿಧರ್ಶನ

 

ಸೌಪರ್ಣಿಕೆ ನದಿಯ ಮೇಲೆ ಕಿರು ದೋಣಿಯಲ್ಲಿ ಕುಳಿತು ಜಲವಿಹಾರ ಮಾಡುಹುದು ಬದುಕಿನ ಒಂದು ಅವಿಸ್ಮರಣಿಯ ಅನುಭವ,ನದಿಯ ಉದ್ದಕ್ಕೊ ಕುಣಿದು ಕುಪ್ಪಳಿಸುವ ಮೀನುಗಳು ಬಗೆ ಬಗೆಯ ಜಲಚರಗಳು ಸಾಲು ಸಾಲಾದ ಬೆಳ್ಳಕ್ಕಿಗಳ ತೋರಣ ತೆಂಗಿನ ಗರಿಗಳ ಪಿಸು ಪಿಸು ಧ್ವನಿ,ಮೇಲೆ ಕಣ್ಣಳತೆಗೂ ನಿಲುಕದ ನೀಲಾಕಾಶ ಕೆಳಗೆ ಪ್ರತಿಬಿಂಬ ಮೂಡಿಸುವ ಶುದ್ಧ ಜಲರಾಶಿ

ಮರವಂತೆಯ ಸೂರ್ಯೋದಯ ಸೂರ್ಯಾಸ್ತಗಳ ಸೊಬಗನ್ನು ಅನುಭವಿಸಿಯೇ ನೋಡಬೇಕು ಮಾತಿಗೆ ನಿಲುಕದ ಸೌಂದರ್ಯ ಮನಸ್ಸಿಗೆ ಮುದ ನೀಡುವ ಸೊಬಗು ಈ ಉದಯಾಸ್ತಗಳದು,ಮೇಲೆ ನೀಲಾಕಾಶ ಕೆಳಗೆ ಬಿಳಿ ಮರಳು ಕಣ್ಣಳತೆ ಸಾಗುವಷ್ಟು ದೂರ ನೀಲಿ ನೀರಿನ ಅರಬ್ಬಿ ಸಮುದ್ರ ನಿಮಿಷ ನಿಮಿಷಕ್ಕೆ ಬಣ್ಣ ಬದಲಾಯಿಸುವ ಸೂರ್ಯ ನಿಜಕ್ಕೊ ಅದ್ಭುತ …ಕೆ.ಗಣೇಶ್‌ ಹೆಗ್ಡೆ


   

Related Articles

error: Content is protected !!