Home » ತಿರುಪತಿ ದೇಗುಲಕ್ಕೆ 121 ಕೆಜಿ ಚಿನ್ನ ಕಾಣಿಕೆ
 

ತಿರುಪತಿ ದೇಗುಲಕ್ಕೆ 121 ಕೆಜಿ ಚಿನ್ನ ಕಾಣಿಕೆ

by Kundapur Xpress
Spread the love

ಅಮರಾವತಿ : ತಿರುಮಲ ತಿರುಪತಿ ದೇಗುಲಕ್ಕೆ ಭಕ್ತರೊಬ್ಬರು 140 ಕೋಟಿ ರೂ. ಮೌಲ್ಯದ 121 ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಾಹಿತಿ ನೀಡಿದ್ದಾರೆ.

ಈ ಉದ್ಯಮಿಗೆ ತಮ್ಮ ಸ್ವಂತ ಕಂಪನಿಯೊಂದನ್ನು ಸ್ಥಾಪಿಸುವ ಕನಸಿದ್ದು ಅದು ಯಶಸ್ವಿಯಾಗಿರುವ ಉದ್ದೇಶದಿಂದ ಈ ಚಿನ್ನವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ ಎಂದು ನಾಯ್ಡು ತಿಳಿಸಿದ್ದಾರೆ. ತನ್ನ ಪರಿಚಯವನ್ನು ನಿಗೂ ಢವಾಗಿ ಇರಿಸಲು ಬಯಸಿದ್ದಾರೆ, ಆದ್ದರಿಂದ ಅವರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.

ಈವರೆಗೆ ಪ್ರತಿನಿತ್ಯ ಭಗವಾನ್ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಸುಮಾರು 120 ಕೆಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತಿತ್ತು. ಈ ಬಗ್ಗೆ ತಿಳಿದ ದಾನಿಯು ಇನ್ನೂ 121ಕೆಜಿ ಚಿನ್ನವನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ಟಿಡಿಪಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

 

Related Articles

error: Content is protected !!