Home » ಕೋಟ ಅಮೃತೇಶ್ವರಿ ದೇಗುಲದಲ್ಲಿ ವೈಭವದ ಶರನ್ನವರಾತ್ರಿ ಸಂಪನ್ನ
 

ಕೋಟ ಅಮೃತೇಶ್ವರಿ ದೇಗುಲದಲ್ಲಿ ವೈಭವದ ಶರನ್ನವರಾತ್ರಿ ಸಂಪನ್ನ

by Kundapur Xpress
Spread the love

ಕೋಟ : ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ ಶನಿವಾರ ವಿಜಯದಶಮಿಯಂದು ಸಹಸ್ರಾರು ಭಕ್ತರ ನಡುವೆ ಸಂಪನ್ನಗೊಂಡಿತು.ದೇಗುಲದಲ್ಲಿ ಪೂರ್ವಾಹ್ನದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಕ್ತಿರಸ ಸಂಗೀತದ ನಡುವೆ ವೈಭವ ಪೂರಿತವಾಗಿ ನೆರವೆರಿತು.

ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಕೋಟದ ಜನತಾ ಸಮೂಹಸಂಸ್ಥೆಗಳ ಮುಖ್ಯಸ್ಥ,ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಕುಟುಂಬಿಕರು ಚಂಡಿಕಾ ಸಪ್ತಶತಿ ಪಾರಾಯಣ,ದುರ್ಗಾಹೋಮದಲ್ಲಿ ಸೇವಾಕರ್ತರಾಗಿ ಭಾಗಿಯಾದರು.ದೇಗುಲದ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ಪರವಾಗಿ ಚಂದ್ರಶೇಖರ್ ಮಯ್ಯ ಸಾರಥ್ಯದಲ್ಲಿ ಜರಗಿತು.ದೇಗುಲದ ಆಡಳಿತ ಮಂಡಳಿಯ ಸದಸ್ಯರು ಕುಂದರ್ ಕುಟುಂಬಕ್ಕೆ ಪ್ರಸಾದ ವಿತರಿಸಿ ಗೌರವಿಸಿದರು.
ದೇಗುಲದಲ್ಲಿ ವಿಶೇಷ ಅಲಂಕಾರ ದೇವಿಯ ಹತ್ತನೆ ದಿನದ ಸಿಂಹವಾಹಿನಿ ಅವತಾರದಲ್ಲಿ ಪುಷ್ಭಾಂಲಕಾರ ಭಕ್ತರ ಗಮನ ಸೆಳೆದಳು.ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಮುಖ್ಯಕಾರ್ಯನಿರ್ವಹಣಾಧಿಕಾರಿ, ಮಾಜಿ ಟ್ರಸ್ಟಿ ಸದಸ್ಯರು, ವ್ಯವಸ್ಥಾಪಕರು,ಸಿಬ್ಬಂದಿವರ್ಗ,ದೇಗುಲ ಅರ್ಚಕ ವೃಂದ ಉಪಸ್ಥಿತರಿದ್ದರು.

ದೇಗುಲದಲ್ಲಿ ಭಕ್ತರ ಮಹಾಪೂರ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಇದೇ ಮೊದಲೆಂಬಂತೆ ಸುಮಾರು ಆರು ಸಾವಿರಕ್ಕೂ ಅಧಿಕ ಭಕ್ತಮಹಾಶಯರು ಭಾಗಿಯಾಗಿ ದೇವಿಯ ದರ್ಶನ ಪಡೆದರು.ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಭಾಗಿಯಾದರು.

   

Related Articles

error: Content is protected !!