Home » ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ : ಬ್ರಹ್ಮ ಕಲಶ ವರ್ಧಂತಿ ಉತ್ಸವ ಸಂಪನ್ನ
 

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ : ಬ್ರಹ್ಮ ಕಲಶ ವರ್ಧಂತಿ ಉತ್ಸವ ಸಂಪನ್ನ

by Kundapur Xpress
Spread the love

ಆನೆಗುಡ್ಡೆ : ಶ್ರೀ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮ ಕಲಶ ವರ್ಧಂತಿ ಉತ್ಸವಗಳು ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿ, ಶಿಬರೂರು ಕೃಷ್ಣರಾಜ ತಂತ್ರಿ ಹಾಗೂ ವಿವಿಧ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ 19.02.2026 ರಿಂದ 20.02.2026 ರ ತನಕ ನಡೆಯಿತು.

20.02.2026 ನೇ ಶುಕ್ರವಾರ ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ ಸ್ವಸ್ತಿವಾಚನ, ಪುಣ್ಯಾಹ, ಗಣ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ತತ್ವ ಹೋಮ, ಕಲಾ ಹೋಮ ಪೂರ್ವಾಹ್ನ ಗಂಟೆ 10:30ಕ್ಕೆ 108 ರಜತ ಕಲಶಾಭಿಷೇಕ ದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಾರ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳಾದ ಕೆ ಶ್ರೀ ರಮಣ ಉಪಾಧ್ಯಾಯರು ಊರಿನ ವಿವಿಧ ಗಣ್ಯರಿಗೆ ಹಾಗೂ ಸಮಾಜಸೇವಕರಿಗೆ ಶ್ರೀ ದೇವರ ವಿಶೇಷ ಪ್ರಸಾದ ನೀಡುವ ಮುಖೇನ ಸನ್ಮಾನಿಸಲಾಯಿತು. ಊರ ಪರ ಊರಿನ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ, ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.
ಧರ್ಮದರ್ಶಿಗಳಾದ ನಿರಂಜನ ಉಪಾಧ್ಯಾಯ ಪದ್ಮನಾಭ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಮತ್ತು ಸಹೋದರರು ದೇವಳದ ಪ್ರಬಂಧಕರಾದ ನಟೇಶ್ ಕಾರಂತ್ ಆಡಳಿತ ಸಿಬ್ಬಂದಿಗಳು, ಅರ್ಚಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

 

Related Articles

error: Content is protected !!