ಕುಂದಾಪುರ : ನಾಳೆ ಭಾದ್ರಪದ ಶುಕ್ಲಪಕ್ಷದ ಚೌತಿಯಂದು ಕುಂಭಾಸಿ ಆನೆಗುಡ್ಡೆಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಹಬ್ಬ ಜರುಗಲಿದ್ದು ಎಲ್ಲಡೇ ಸಂಭ್ರಮ ಮನೆಮಾಡಿದೆ ಈಗಾಗಲೇ ದೇವಸ್ಥಾನಕ್ಕೆ ದೀಪಾಲಂಕಾರ ಹೂವಿನ ಅಲಂಕಾರ ಹಾಗೂ ಶುಚತ್ವಕ್ಕೆ ಮಹತ್ವ ಕೊಡಲಾಗಿದೆ
ಗಣೇಶ ಚತುರ್ಥಿಯ ಅಂಗವಾಗಿ ಕ್ಷೇತ್ರದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಾಲ್ಯ ವಿಸರ್ಜನೆ ಪೂಜೆ, ಮಧ್ಯಾಹ್ನ ಪಂಚಾಮೃತ ಸಹಿತ ಉಪನಿಷತ್ ಕಲಶಾಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ, ಸತ್ಯಗಣಪತಿ ವ್ರತ ಸಹಿತ ಮಹಾಪೂಜೆ, ಮೂಡುಗಣಪತಿ, ಸಾಮೂಹಿಕ ರಂಗಪೂಜೆ, ಅಷ್ಟೋತ್ತರ ಸೇವೆ ಹಾಗೂ ವಿಶೇಷವಾಗಿ ಕಡುಬಿನ ಸೇವೆಗಳು ನಡೆಯಲಿದೆ.ಮಹಾ ರಂಗಪೂಜೆಯ ನಂತರ ರಾತ್ರಿ ರಜತ ಪಲ್ಲಕ್ಕಿಯಲ್ಲಿ ಶ್ರೀ ದೇವರ ಸ್ವರ್ಣ ಉತ್ಸವ ಮೂರ್ತಿಯನ್ನು ರಜತ ವಾಲಗ ಮಂಟಪದಲ್ಲಿ ಪೂಜಿಸಿ ಅಷ್ಟಾವಧಾನ ಸೇವೆಗಳು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳು: ಸೆ.6ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಗುರುಸಾರ್ವಭೌಮ ಮಹಿಳಾ ಭಜನಾ ಮಂಡಳಿ ರಾಮಕುಂಜ ಉಪ್ಪಿನಂಗಡಿ ಪುತ್ತೂರು ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 5 ಗಂಟೆಯಿಂದ ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಮಂಗಳೂರು ಇವರಿಂದ ಯಕ್ಷಗಾನ ಗಣೇಶ ಮಹಿಮೆ ಪ್ರದರ್ಶನಗೊಳ್ಳಲಿದೆ.ಸೆ.7ರಂದು ಸಂಜೆ 4 ರಿಂದ 6 ಗಂಟೆಯ ತನಕ ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕಡೆ ಮತ್ತು ಬಳಗ(ಸಪ್ತಸ್ವರ ಸಂಗೀತ ಬಳಗ) ಕುಕ್ಕುಡೆ ಅವರಿಂದ ದಾಸ ಸಾಹಿತ್ಯ ಹಾಗೂ ಸುಗಮ ಸಂಗೀತ ಸಂಜೆ .6 ಗಂಟೆಯಿಂದ 8ರ ತನಕ ಯಕ್ಷತರಂಗ ವ್ಯವಸಾಯಿ ಯಕ್ಷ ತಂಡ ಕೋಟ ಅವರಿಂದ ಯಕ್ಷಗಾನ ಕೃಷ್ಣಾರ್ಜುನ, ರಾತ್ರಿ 10 ಗಂಟೆಯಿಂದ ಶ್ರೀ ದಶಾವತಾರ ಸೇವೆಯಾಟ ಅತಿಥಿ ಕಲಾವಿದರ ಕೂಡುವಿಕೆಯಿಂದ ದಕ್ಷಯಜ್ಞ ಯಕ್ಷಗಾನ ಬಯಲಾಟ ನಡೆಯಲಿದೆ.
ಚೌತಿಯ ಹಿನ್ನಲ್ಲೆಯಲ್ಲಿ ದೇವಳದಲ್ಲಿ ಯಾವುದೇ ವಾಹನ ಪೂಜೆ ಮತ್ತು ಸತ್ಯನಾರಾಯಣ ಪೂಜೆಯ ಕಾರ್ಯಕ್ರಮ ನಡೆಯುವುದಿಲ್ಲ. ರಾತ್ರಿ ಸಾರ್ವಜನಿಕವಾಗಿ ಮಹಾರಂಗ ಪೂಜಾ ಉತ್ಸವ ನಡೆಯಲಿದೆ. ಇದಲ್ಲದೇ ದಿನನಿತ್ಯ ನಡೆಯುವ ಸೇವಾ ಕಾರ್ಯಕ್ರಮದಲ್ಲಿ ಸಮಯ ಹಾಗೂ ಬೇರೆ ಬೇರೆ ಸೇವೆಗಳಲ್ಲಿ ವ್ಯತ್ಯಾಸಗಳಾಗಬಹುದು. ಇದರಿಂದ ಭಕ್ತರು ಸಹಕರಿಸಬೇಕು. ಚೌತಿ ಹಬ್ಬದ ವಿಶೇಷವಾಗಿ ಜೀವಮಾನ ಪರ್ಯಾಂತ ಪರ್ಯಾಯ ಅರ್ಚಕರಿಂದ 21 ನಾನಾ ಬಗೆಯ ಪಂಚಖ್ಯಾದ್ಯಗಳನ್ನು ಶ್ರೀ ದೇವರಿಗೆ ಸಮರ್ಪಿಸಿ ಬೆಳಗ್ಗೆಯಿಂದ ರಾತ್ರಿ ತನಕ ಬರುವ ಭಕ್ತರಿಗೆ ಪ್ರಸಾದಗಳನ್ನು ವಿತರಿಸಲಾಗುತ್ತದೆ.
– ಕೆ. ಶ್ರೀರಮಣ ಉಪಾಧ್ಯಾಯ,
ಆನುವಂಶಿಕ ಆಡಳಿತ ಧರ್ಮದರ್ಶಿಗಳು
ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನ