ಕುಂದಾಪುರ : ನಾಡಿನೆಲ್ಲೆಡೆ ಗಣೇಶನ ಹಬ್ಬ ನಡೆಯುತ್ತಿರುವಂತೆ ಕುಂದಾಪುರದ ಇತಿಹಾಸ ಪ್ರಸಿದ್ದ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು
ಆನೆಗುಡ್ಡೆ ವಿನಾಯಕ ದೇವಸ್ಥಾನವು ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು ಬೆಳಿಗ್ಗೆಯಿಂದಲೇ ದೇವರ ದರ್ಶನಕ್ಕಾಗಿ ಸಹಸ್ರಾರು ಭಕ್ತರ ದಂಡೇ ಆಗಮಿಸಿತ್ತುಸುಮಾರು 50,000ಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗವು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು
ಆನೆಗುಡ್ಡೆ ಗಣಪತಿಗೆ 21 ಬಗೆಯ ವಿವಿಧ ಖಾದ್ಯಗಳ ನೈವೇದ್ಯ ಸಮರ್ಪಣೆಯಾಯಿತು ನೈವೇದ್ಯ ಪ್ರಸಾದವನ್ನು 50,000 ಕ್ಕೂ ಅಧಿಕ ಭಕ್ತಾದಿಗಳಿಗೆ ವಿತರಿಸಲಾಯಿತು ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು
ಸಂಜೆ 4.00 ರಿಂದ 6.00 ಗಂಟೆಯತನಕ ಖ್ಯಾತ ಹಿಂದುಸ್ಥಾನಿ ಗಾಯಕರಾದ ಪ್ರದೀಪ್ ಕುಕ್ಕುಡೆ ಬಳಗದವರಿಂಧ ದಾಸ ಸಾಹಿತ್ಯ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು ಸಂಜೆ 6.00 ರಿಂದ 8.00ರ ತನಕ ಯಕ್ಷತರಂಗ ಇವರಿಂದ ಯಕ್ಷಗಾನ ಕೃಷ್ಣಾರ್ಜುನ ಹಾಗೂ ರಾತ್ರಿ 10.00 ರಿಂದ ದಕ್ಷಯಜ್ಞ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು
ಈ ಸಂದರ್ಭದಲ್ಲಿ ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯ ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಶ್ರೀ ಕೆ ಸೂರ್ಯನಾರಾಯಣ ಉಪಾಧ್ಯಾಯ ಶ್ರೀ ಕೆ ನಿರಂಜನ ಉಪಾಧ್ಯಾಯ ಶ್ರೀ ಕೆ ಪದ್ಮನಾಭ ಉಪಾಧ್ಯಾಯ
ಹಾಗೂ ಪರ್ಯಾಯ ಅರ್ಚಕರಾದ ಶ್ರೀ ಕೆ ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು ಮೆನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು