Home » ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಸಡಗರ ಸಂಭ್ರಮದ ಚೌತಿ
 

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಸಡಗರ ಸಂಭ್ರಮದ ಚೌತಿ

by Kundapur Xpress
Spread the love

ಕುಂದಾಪುರ : ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಿನ್ನೆ ಬುಧವಾರ ವಿನಾಯಕ ಚತುರ್ಥಿ ಮಹೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗವು ವಿಶೇಷ ಪೂಜೆಯೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ  ಸಂಭ್ರಮದಿಂದ ಜರಗಿತು.

ಶ್ರೀ ವಿನಾಯಕ ದೇಗುಲವು ವಿಶೇಷವಾದ ಹೂವುಗಳಿಂದ ಸಂಪೂರ್ಣ ಅಲಂಕರಿಸಲ್ಪಟ್ಟು ಶೃಂಗಾರಮಯಗೊಂಡಿತ್ತು  ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಹಾಗೂ ಸಹೋದರರ ನೇತೃತ್ವದಲ್ಲಿ ಸಕಲ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು 

ಬೆಳಿಗ್ಗೆಯಿಂದಲೇ ಭಕ್ತಾದಿಗಳು ಕ್ಷೇತ್ರಕ್ಕೆ ಅಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು  ಶ್ರೀದೇವರಿಗೆ ಅರ್ಪಿಸಿದ ಹಲವು ಬಗೆಯ ಖಾದ್ಯಗಳನ್ನು ಭಕ್ತರಿಗೆ ಬೆಳಗ್ಗೆಯಿಂದ ಸಂಜೆ ತನಕ ಪ್ರಸಾದಗಳ ರೂಪದಲ್ಲಿ ವಿತರಿಸಲಾಗುವುದು.

60 ಸಾವಿರ ಭಕ್ತರಿಂದ ದರ್ಶನ

ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 60 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವರ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದು 10 ಸಾವಿರಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂದು ದೇಗುಲದ ಆಡಳಿತ ಧರ್ಮದರ್ಶಿಗಳಾದ ಕೆ ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ

ದುಬೈಯಲ್ಲಿನ ಫಾರ್ಚೂನ್‌ ಗ್ರೂಫ್‌ ಮಾಲಕರಾದ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿಯವರು ದೇಗುಲಕ್ಕೆ ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು ಈ ಸಂದರ್ಭದಲ್ಲಿಆಡಳಿತ ಧರ್ಮದರ್ಶಿಗಳಾದ ಕೆ ಶ್ರೀರಮಣ ಉಪಾಧ್ಯಾಯರವರು ಅವರಿಗೆ ಶಾಲು ಹೊದೆಸಿ ಗೌರವಿಸಿದರು

ಪಾರ್ಕಿಂಗ್‌ ಮತ್ತು ಪೊಲೀಸ್‌ ಭದ್ರತೆ

ಶ್ರೀ ವಿನಾಯಕ ಚತುರ್ಥಿಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ದೇಗುಲದಲ್ಲಿ ವಿಶೇಷ ಭದ್ರತೆಯನ್ನು ಎರ್ಪಡಿಸಲಾಗಿತ್ತು

 ಡಿವೈಎಸ್‌ಪಿ ಎಚ್‌ ಡಿ ಕುಲಕರ್ಣಿ‌ಯವರ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಜಯರಾಮ್ ಡಿ ಗೌಡ ಶಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಂಚಾರ ಠಾಣೆಯ‌ ಉಪ ನಿರೀಕ್ಷಕರಾದ ಸುದರ್ಶನ್, ನೂತನ್‌ ಮತ್ತು ಸಿಬಂದಿಗಳು ಬಂದೋಬಸ್ತಿನಲ್ಲಿ ಪಾಲ್ಗೊಂಡು ವ್ಯವಸ್ಥಿತ ಪಾರ್ಕಿಂಗ್‌ ಕಲ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಶ್ವೇಶ್ವರ ಮಹಿಳಾ ಭಜನಾ ಮಂಡಳಿ ಆನೆಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ ವಿಜಯರಂಗ ಬೆಂಗಳೂರು ಇವರಿಂದ ದಾಸವಾಣಿ ಹಾಗೂ ಪ್ರಣವ್ ಅಡಿಗ ಹಾಗೂ ಬಳಗ ಉಡುಪಿ ಇವರಿಂದ ಕೊಳಲು ವಾದನ ಯಕ್ಷಾಂತರಂಗ  ವ್ಯವಸಾಯ ಯಕ್ಷ ತಂಡ ಕೋಟ ಇವರಿಂದ ಲವಕುಶ ಯಕ್ಷಗಾನ ಮತ್ತು ರಾತ್ರಿ 10.00 ಗಂಟೆಯಿಂದ ವಿವಿಧ ಕಲಾವಿದ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಭೀಷ್ಮವಿಜಯ ಜರುಗಿತು

 

Related Articles

error: Content is protected !!