119
ಕುಂಭಾಸಿ : ಇತಿಹಾಸ ಪ್ರಸಿದ್ದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇಂದು ಬ್ರಹ್ಮಕಲಶ ವರ್ಧಂತ್ಯುತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಈ ಪ್ರಯುಕ್ತ ದೇವಳದಲ್ಲಿ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಸ್ವಸ್ತಿ ವಾಚನ, ಪುಣ್ಯಾಹ್ನ, ಗಣಹೋಮ, ಶಾಂತಿ, ಪ್ರಾಯಶ್ಚಿತ್ತ ಹೋಮ, ತತ್ತ್ವ ಹೋಮ, ಕಲಾ ಹೋಮದೊಂದಿಗೆ ಬೆಳಗ್ಗೆ 10.30ಕ್ಕೆ 108 ರಜತ ಕಲಶಾಭಿಷೇಕ, ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ. ವಾರ್ಷಿಕ ಬ್ರಹ್ಮಕಲಶ ವರ್ಧಂತ್ಯುತ್ಸವ ಪ್ರಯುಕ್ತ ಶ್ರೀ ದೇವಳದಲ್ಲಿ ನಡೆಯುವ ರಂಗಪೂಜೆ, ಮೂಡು ಗಣಪತಿ ಸೇವೆ, ಸತ್ಯನಾರಾಯಣ ವೃತ ಇತ್ಯಾದಿ ಸೇವೆಗಳ ಸಮಯ ವ್ಯತ್ಯಾಸವಾಗುವುದರಿಂದ ಭಕ್ತಾದಿಗಳು ಸಹಕರಿಸಬೇಕೆಂದು ದೇಗುಲದ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯರವರು ತಿಳಿಸಿದ್ದಾರೆ.

